Ad Widget .

ಮೆಟ್ರೋ ರೈಲಿನಲ್ಲಿ ಶೀಘ್ರವೇ ಟೋಕನ್ ವ್ಯವಸ್ಥೆ ಆರಂಭ

ಬೆಂಗಳೂರು: ಕೊರೊನಾ 2ನೇ ಅಲೆ ನಿಯಂತ್ರಣಕ್ಕೆ ಕರ್ನಾಟಕದಲ್ಲಿ ಹೇರಲಾಗಿದ್ದ ಲಾಕ್‌ಡೌನ್ ಹಂತಹಂತವಾಗಿ ಸಡಿಲಿಯಾಗುತ್ತಿದೆ. ಸದ್ಯ ಸುಮಾರು ೨ ತಿಂಗಳ ನಂತರ ಮೆಟ್ರೋ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಿದ್ದರೂ ಟೋಕನ್ ವ್ಯವಸ್ಥೆ ಸ್ಥಗಿತಗೊಳಿಸಲಾಗಿತ್ತು. ಸದ್ಯ ಈಗ ಮತ್ತೆ ಮೆಟ್ರೋ ರೈಲಿನಲ್ಲಿ ಟೋಕನ್ ವ್ಯವಸ್ಥೆ ಆರಂಭಿಸಲು ಚಿಂತನೆ ನಡೆಯುತ್ತಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಸ್ಮಾರ್ಟ್ ಕಾರ್ಡ್ ಕಡ್ಡಾಯದಿಂದ ಆದಾಯಕ್ಕೆ ಭಾರಿ ಹೊಡೆತ ಬಿದ್ದಿದೆ. ಹೀಗಾಗಿ ಕೊವಿಡ್ ಆತಂಕದಿಂದ ಸ್ಥಗಿತಗೊಂಡಿದ್ದ ಟೋಕನ್ ವ್ಯವಸ್ಥೆಯನ್ನು ಮತ್ತೆ ಆರಂಭಿಸಲು BMRCL ವ್ಯವಸ್ಥೆ ಮಾಡಿಕೊಳ್ಳುತ್ತಿದೆ. ಕೊವಿಡ್ ಪೂರ್ವದಲ್ಲಿ ನಿತ್ಯ ೫ ಲಕ್ಷ ಜನರು ಪ್ರಯಾಣ ಮಾಡುತ್ತಿದ್ದರು. ಆದ್ರೆ 2021ರ ಮಾರ್ಚ್, ಏಪ್ರಿಲ್ನಲ್ಲಿ ಸರಾಸರಿ 1.5 ಲಕ್ಷ ಜನ ಮಾತ್ರ ಪ್ರಯಾಣಿಸಿದ್ದಾರೆ. ನಿನ್ನೆ ಕೇವಲ 59 ಸಾವಿರ ಜನರಷ್ಟೇ ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಪ್ರಯಾಣಿಕರ ಸಂಖ್ಯೆ ಕುಸಿತಕ್ಕೆ ‘ಸ್ಮಾರ್ಟ್ ಕಾರ್ಡ್’ ಕಾರಣವಾಗುತ್ತಿದೆ ಹೀಗಾಗಿ ಸದ್ಯದಲ್ಲೇ ಟೋಕನ್ ವ್ಯವಸ್ಥೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.

Ad Widget . Ad Widget . Ad Widget .

ಮೆಟ್ರೋ ಬೆಳಗ್ಗೆ 7ರಿಂದ 11ಗಂಟೆವರೆಗೆ ಹಾಗೂ ಮಧ್ಯಾಹ್ನ 3ರಿಂದ ಸಂಜೆ 6 ಗಂಟೆಯವರೆಗೆ ಪ್ರತಿ 5ನಿಮಿಷಕ್ಕೆ ಒಂದರಂತೆ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಸಂಚಾರ ನಡೆಸುತ್ತಿದೆ. ಮೆಟ್ರೋ ನಿಲ್ದಾಣದಲ್ಲಿ ದೇಹದ ಉಷ್ಣಾಂಶ ತಪಾಸಣೆ, ಹ್ಯಾಂಡ್ ಸ್ಯಾನಿಟೈಸ್ ಕಡ್ಡಾಯ. ಮುಖಗವಸು ಧರಿಸಿದವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು ಹಾಗೂ ಎಲ್ಲಾ ಸಂದರ್ಭದಲ್ಲೂ ದೈಹಿಕ ಅಂತರ ಪಾಲಿಸಲೇಬೇಕು. ಹಳದಿ ಬಣ್ಣದ ಪಟ್ಟಿಯಲ್ಲಿ ಮಾತ್ರ ಕುಳಿತು ಅಥವಾ ನಿಂತು ಪ್ರಯಾಣ ಮಾಡಬೇಕಿದ್ದು, ವಾರಾಂತ್ಯದ ಕರ್ಫ್ಯೂ ನಿಮಿತ್ತ ಶನಿವಾರ, ಭಾನುವಾರ ಮೆಟ್ರೋ ಸಂಚಾರ ಇರುವುದಿಲ್ಲ.

ಕೊವಿಡ್ ಪೂರ್ವದಲ್ಲಿ ಶೇ40% ಪ್ರಯಾಣಿಕರು ಟೋಕನ್ ಬಳಸಿಯೇ ಪ್ರಯಾಣಿಸುತ್ತಿದ್ರು. ಸದ್ಯ ಟೋಕನ್ ಇಲ್ಲದೆ ಇರುವ ಕಾರಣ ಸ್ಮಾರ್ಟ್ ಕಾರ್ಡ್ 150 ರೂಪಾಯಿ ನೀಡಿ ಪ್ರಯಾಣಿಸಬೇಕಿದೆ. ಹೀಗಾಗಿ ಬೆಂಗಳೂರಿಗೆ ಬಂದು ಹೋಗುವ ಪ್ರಯಾಣಿಕರು ಮೆಟ್ರೋದತ್ತ ಸುಳಿಯುತ್ತಿಲ್ಲ. ಸದ್ಯ ಮೆಟ್ರೋದಲ್ಲಿ 50% ರಷ್ಟು ಜನರು ಸಂಚರಿಸಲು ಮಾತ್ರ ಅವಕಾಶ ನೀಡಲಾಗಿದೆ. ಮೂರನೇ ಹಂತದ ಅನ್‌ಲಾಕ್ ದಿನವಿಡೀ ಮೆಟ್ರೋ ಸಂಚಾರ ಆರಂಭವಾಗುವ ಸಾಧ್ಯತೆ ಇದೆ.

Leave a Comment

Your email address will not be published. Required fields are marked *