ಮೂಡಬಿದಿರೆ: ಗ್ರಾಹಕನ ಎಡವಟ್ಟಿನಿಂದ ಹೋಟೆಲ್ ಟಿ.ವಿಯಲ್ಲಿ ಸೆಕ್ಸ್ ಆಡಿಯೋ; ನೌಕರನಿಂದ ಗ್ರಾಹಕನಿಗೆ ಹಲ್ಲೆ

ಸಾಂದರ್ಭಿಕ ಚಿತ್ರ

Ad Widget ... ..

ಮೂಡಬಿದಿರೆ: ಹೊಟೇಲೊಂದರಲ್ಲಿ ಗ್ರಾಹಕನೋರ್ವ ಯೂಟ್ಯೂಬ್ ಮೂಲಕ ವಿಡಿಯೋ ನೋಡುತ್ತಿರುವಾಗ ಅದರಲ್ಲಿನ ಸೆಕ್ಸ್ ಧ್ವನನಿ ಹೊರಗಡೆ ಜೋರಾಗಿ ಕೇಳಿರುವ ಪರಿಣಾಮ ಕೆರಳಿದ ಹೊಟೇಲ್ ನೌಕರ ಗ್ರಾಹಕನಿಗೆ ಹಲ್ಲೆ ನಡೆಸಿದ ಘಟನೆ ನಡೆದಿದೆ.

Ad Widget

ಜೂನ್ 28ರಂದು ಸಂಜೆ ಮುನೀರ್ ಎಂಬವರು ಶೊರ್ಮವಾಲಾ ಹೋಟೆಲ್‌ಗೆ ಆರ್ಡರ್ ಮಾಡಲು ಬಂದಿದ್ದರು. ಈ ಸಂದರ್ಭ ಅಲ್ಲಿನ ಟಿ.ಎಸ್.ಕೆಫೆಯ ವೈಫೈ ಮುನೀರ್ ಮೊಬೈಲ್‌ಗೆ ಕನೆಕ್ಟ್ ಆಗಿದೆ. ಇದರಿಂದ ಮುನೀರ್ ಅವರು ಮೊಬೈಲ್‌ನಲ್ಲಿರು ಯುಟ್ಯೂಬ್‌ನಲ್ಲಿ ವೀಡಿಯೋ ನೋಡುತ್ತಿದ್ದರು. ಈ ಸಂದರ್ಭ ಸೆಕ್ಸ್ ವಾಯ್ಸ್ ಕೇಳಿಸಿದೆ. ಅದಲ್ಲದೆ ವೈಫೈ ಮೂಲಕ ಟಿ.ಎಸ್.ಕೆಫೆಯ ಟಿವಿಗೆ ಕೆನೆಕ್ಟ್ ಆಗಿದ್ದರಿಂದ ಈ ಶಬ್ಧ ಅಲ್ಲಿಯೂ ಜೋರಾಗಿ ಕೇಳಿಸಿಕೊಂಡಿದೆ.

ಈ ಪರಿಣಾಮ ಕೋಪಗೊಂಡ ಕೆಫೆ ನೌಕರ ಸಿನಾನ್ ಎಂಬಾತ ಮುನೀರ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ವೇಳೆ ಮುನೀರ್ ಅವರು ಕ್ಷಮೆಯಾಚಿಸಿದರೂ ಸಿನಾನ್ ಬಿಡದೆ ಕೈಗಳಿಂದ ಮತ್ತು ಪ್ಲಾಸ್ಟಿಕ್ ಕುರ್ಚಿಯಿಂದ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಲ್ಲೆಯಿಂದ ಮುನೀರ್ ತುಟಿಗೆ, ಎದೆಯ ಭಾಗಕ್ಕೆ ಗಾಯಗಳಾಗಿದೆ.

ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

1 thought on “ಮೂಡಬಿದಿರೆ: ಗ್ರಾಹಕನ ಎಡವಟ್ಟಿನಿಂದ ಹೋಟೆಲ್ ಟಿ.ವಿಯಲ್ಲಿ ಸೆಕ್ಸ್ ಆಡಿಯೋ; ನೌಕರನಿಂದ ಗ್ರಾಹಕನಿಗೆ ಹಲ್ಲೆ”

  1. Pingback: ಮಂಗಳೂರು: ರಾತ್ರೋರಾತ್ರಿ ಮಹಿಳೆಯರ ಸಾಗಾಟ ಪ್ರಕರಣಕ್ಕೆ ತಿರುವು ; ಮೆಡಿಕಲ್ ಕಾಲೇಜ್‌ಗಳ ಕಳ್ಳಾಟದ ಸತ್ಯ ಬಯಲು ; ಇ

Leave a Comment

Your email address will not be published. Required fields are marked *