Ad Widget .

ರಾತ್ರೋರಾತ್ರಿ ಕಣಚೂರು ಆಸ್ಪತ್ರೆ ಬಸ್ಸಿನಲ್ಲಿ ಮಹಿಳೆಯರ ಸಾಗಣೆ | ಬೆಚ್ಚಿಬಿದ್ದ ಮಂಗಳೂರಿನ ನಾಗರಿಕರು

ಮಂಗಳೂರು: ಮೂಡಬಿದಿರೆಯ ಕಾರ್ನಾಡು ಗ್ರಾಮದಿಂದ ಬರೋಬ್ಬರಿ 85 ಮಹಿಳೆಯರನ್ನು ಮಂಗಳೂರು ಹೊರವಲಯದ ನಾಟೆಕಲ್ ಖಾಸಗಿ ಆಸ್ಪತ್ರೆ ಬಸ್ಸಿನಲ್ಲಿ ಕರೆದೊಯ್ದ ಘಟನೆ ನಡೆದಿದೆ.

Ad Widget . Ad Widget .

ಈ ಬಗ್ಗೆ ಸ್ಥಳೀಯರು ಬಸ್ ಚಾಲಕ ಮತ್ತು ಜೊತೆಗಿದ್ದ ಆಸ್ಪತ್ರೆ ಮ್ಯಾನೇಜರ್ ನನ್ನು ತಡೆದು ವಿಚಾರಿಸಿದಾಗ ಆರೋಗ್ಯ ತಪಾಸಣೆ ನಡೆಸಲು ಮತ್ತು ವ್ಯಾಕ್ಸಿನೇಷನ್ ನೀಡಲು ಕರೆದೊಯ್ಯುತ್ತಿರುವುದಾಗಿ ಹೇಳಿದ್ದಾನೆ. ಸ್ಥಳೀಯರು ಯಾವ ಕಾರಣಕ್ಕಾಗಿ ತಡರಾತ್ರಿ ವ್ಯಾಕ್ಸಿನೇಷನ್ ನೀಡುತ್ತೀರಿ ಎಂದು ವಿಚಾರಿಸಿದಾಗ ಆತ ತಬ್ಬಿಬ್ಬಾಗಿದ್ದಾನೆ.

Ad Widget . Ad Widget .

ಈ ವೇಳೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಪೊಲೀಸರು ದೇರಳಕಟ್ಟೆ ಕಣಚೂರು ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಮ್ಯಾನೇಜರ್ ನವಾಜ್ ಮತ್ತು ಬಸ್ ಚಾಲಕ ಪ್ರವೀಣನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತನಿಖೆ ಬಳಿಕ ಸತ್ಯ ಬಯಲಾಗಲಿದೆ.

1 thought on “ರಾತ್ರೋರಾತ್ರಿ ಕಣಚೂರು ಆಸ್ಪತ್ರೆ ಬಸ್ಸಿನಲ್ಲಿ ಮಹಿಳೆಯರ ಸಾಗಣೆ | ಬೆಚ್ಚಿಬಿದ್ದ ಮಂಗಳೂರಿನ ನಾಗರಿಕರು”

  1. Pingback: ಮಂಗಳೂರು: ರಾತ್ರೋರಾತ್ರಿ ಮಹಿಳೆಯರ ಸಾಗಾಟ ಪ್ರಕರಣಕ್ಕೆ ತಿರುವು ; ಮೆಡಿಕಲ್ ಕಾಲೇಜ್‌ಗಳ ಕಳ್ಳಾಟದ ಸತ್ಯ ಬಯಲು ; ಇ

Leave a Comment

Your email address will not be published. Required fields are marked *