Ad Widget .

ಲಾಕ್ ಡೌನ್ ನಿಂದ‌ ಕೆಲಸ ಕಳ್ಕೊಂಡ ಪತಿ‌ ಮಾಡಿದ ಕಾರ್ಯಕ್ಕೆ ಡೈವೋರ್ಸ್ ಕೇಳಿದ ಪತ್ನಿ! | ಅಷ್ಟಕ್ಕೂ ಆತ ಮಾಡಿದ್ದೇನು?

ಬೆಂಗಳೂರು: ಬೆಂಗಳೂರು ಮೂಲದ 24 ವರ್ಷದ ಮಹಿಳೆಯೊಬ್ಬಳು ತನ್ನ ಪತಿ ಎರಡು ವರ್ಷಗಳ ಕಾಲ ಲೈಂಗಿಕ ಕಾರ್ಯಕರ್ತನಾಗಿ ಕೆಲಸ ಮಾಡುವುದು ತಿಳಿದ ಬಳಿಕ ಈಗ ಡೈವೋರ್ಸ್‌ಗೆ ಅರ್ಜಿ ಸಲ್ಲಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Ad Widget . Ad Widget .

ಬಿಪಿಓ ಉದ್ಯೋಗಿಯಾಗಿದ್ದ ಈ ವ್ಯಕ್ತಿ ಲಾಕ್‌ಡೌನ್ ಸಮಯದಲ್ಲಿ ಕೆಲಸ ಕಳೆದುಕೊಂಡು ಲೈಂಗಿಕ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಈ ನಡುವೆ ತನ್ನ ಗಂಡನ ಕೆಲಸದ ಬಗ್ಗೆ ಅನುಮಾನಗೊಂಡ ಆತ ಪತ್ನಿ, ತನ್ನ ತಮ್ಮ ಸಹಾಯದಿಂದ ಆತನ ಲ್ಯಾಪ್‌ಟಾಪ್‌ ಅನ್ನು ನೋಡಿದ ವೇಳೆಯಲ್ಲಿ ಆತ ನೂರಾರು ಸ್ತ್ರೀಯರ ಜೊತೆಗೆ ನಗ್ನವಾಗಿ, ಕಾಮ ಕ್ರೀಡೆಯಲ್ಲಿ ತೊಡಗಿರುವ ಫೋಟೋಗಳು, ವಿಡಿಯೋಗಳು ಸಿಕ್ಕಿದ್ದಾವೆ ಎನ್ನಲಾಗಿದೆ.

Ad Widget . Ad Widget .

ಈ ಬಗ್ಗೆ ಪತ್ನಿ ಕೇಳಿದ ವೇಳೆಯಲ್ಲಿ ಪ್ರಾರಂಭದಲ್ಲಿ ಆತ ಇಲ್ಲವೆಂದು ವಾದಿಸಿದ್ದಾನೆ ಎನ್ನಲಾಗಿದೆ. ಇದಲ್ಲದೇ ತಾನು ಮಾಡಿದ್ದು ತಪ್ಪಾಗಿದ್ದು, ಇನ್ಮುಂದೆ ಹೀಗೆ ಮಾಡುವುದಿಲ್ಲ ಅಂತ ಕೂಡ ಹೇಳಿದ್ದಾನಂತೆ. ಈ ನಡುವೆ ಬೆಂಗಳೂರು ಪೊಲೀಸರ ವನಿತಾ ಸಹಾಯವಾಣಿಗೆ (ಮಹಿಳಾ ಸಹಾಯವಾಣಿ) ದಂಪತಿಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಮೊರೆ ಹೋಗಿದ್ದಾರೆ.

ಆದರೆ ಇಬ್ಬರೂ ತಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಈ ನಡುವೆ ಈಗ ಪರಸ್ಪರ ಒಪ್ಪಿಗೆಯ ವಿಚ್ಚೇದನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಅಂದ ಹಾಗೇ ಈ ದಂಪತಿಗಳು 2017 ರಲ್ಲಿ ಬಿಪಿಓ ಆಫೀಸ್ ಕ್ಯಾಂಟೀನ್‌ನಲ್ಲಿ ಪರಸ್ಪರ ಭೇಟಿಯಾಗಿ ಬಳಿಕ ಇಬ್ಬರ ನಡುವೆ ಡೇಟಿಂಗ್‌ ಆಗಿ ಪ್ರೀತಿಸಿದ ಎರಡು ವರ್ಷಗಳ ನಂತರ, ಇವರಿಬ್ಬರು 2019 ರಲ್ಲಿ ಮದುವೆಯಾಗಲು ನಿರ್ಧರಿಸಿದರು.

ನಂತರ ಬೆಂಗಳೂರು ನಗರದಲ್ಲಿ ಒಂದು ಮನೆಯನ್ನು ಬಾಡಿಗೆಗೆ ಪಡೆದುಕೊಂಡು ಅದರಲ್ಲಿ ಅವರು ವಾಸವಿದ್ದರಂತೆ, ಆದರೆ ಕರೋನವೈರಸ್ ಕಾರಣದಿಂದಾಗಿ ಲಾಕ್‌ಡೌನ್‌ ಆದ ಕಾರಣ, ಈ ವ್ಯಕ್ತಿ ಕಳೆದ ವರ್ಷ ತನ್ನ ಕೆಲಸವನ್ನು ಕಳೆದುಕೊಂಡಿದ್ದಾನೆ, ಇದೇ ವೇಳೆ ಆತನಿಗೆ ನೆರವಿಗೆ ಬಂದಿದ್ದು, ಮೇಲ್‌ ಎಸ್ಕಾರ್ಟ್‌ ಸರ್ವಿಸ್‌ ಈ ಕೆಲಸದಲ್ಲಿ ಆತ 3,000 ರಿಂದ 5,000 ರೂ ವರೆಗೆ ಪ್ರತಿಘಂಟೆಗೆ ಪಡೆದುಕೊಳ್ಳುತ್ತಿದ್ದ ಎನ್ನಲಾಗಿದೆ.

ಬೆಂಗಳೂರು ಪೊಲೀಸರ ವನಿತಾ ಸಹಾಯವಾಣಿಗೆ (ಮಹಿಳಾ ಸಹಾಯವಾಣಿ) ದಂಪತಿಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಮೊರೆ ಹೋಗಿದ್ದಾರೆ. ಆದರೆ ಇಬ್ಬರೂ ತಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಈ ನಡುವೆ ಈಗ ಪರಸ್ಪರ ಒಪ್ಪಿಗೆಯ ವಿಚ್ಚೇದನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಅಂದ ಹಾಗೇ ಈ ದಂಪತಿಗಳು 2017 ರಲ್ಲಿ ಬಿಪಿಓ ಆಫೀಸ್ ಕ್ಯಾಂಟೀನ್‌ನಲ್ಲಿ ಪರಸ್ಪರ ಭೇಟಿಯಾಗಿ ಬಳಿಕ ಇಬ್ಬರ ನಡುವೆ ಡೇಟಿಂಗ್‌ ಆಗಿ ಪ್ರೀತಿಸಿದ ಎರಡು ವರ್ಷಗಳ ನಂತರ, ಇವರಿಬ್ಬರು 2019 ರಲ್ಲಿ ಮದುವೆಯಾಗಲು ನಿರ್ಧರಿಸಿದರು ನಂತರ ಬೆಂಗಳೂರು ನಗರದಲ್ಲಿ ಒಂದು ಮನೆಯನ್ನು ಬಾಡಿಗೆಗೆ ಪಡೆದುಕೊಂಡು ಅದರಲ್ಲಿ ಅವರು ವಾಸವಿದ್ದರಂತೆ, ಆದರೆ ಕರೋನವೈರಸ್ ಕಾರಣದಿಂದಾಗಿ ಲಾಕ್‌ಡೌನ್‌ ಆದ ಕಾರಣ, ಈ ವ್ಯಕ್ತಿ ಕಳೆದ ವರ್ಷ ತನ್ನ ಕೆಲಸವನ್ನು ಕಳೆದುಕೊಂಡಿದ್ದಾನೆ, ಇದೇ ವೇಳೆ ಆತನಿಗೆ ನೆರವಿಗೆ ಬಂದಿದ್ದು, ಮೇಲ್‌ ಎಸ್ಕಾರ್ಟ್‌ ಸರ್ವಿಸ್‌ ಈ ಕೆಲಸದಲ್ಲಿ ಆತ 3,000 ರಿಂದ 5,000 ರೂ ವರೆಗೆ ಪ್ರತಿಘಂಟೆಗೆ ಪಡೆದುಕೊಳ್ಳುತ್ತಿದ್ದ ಎನ್ನಲಾಗಿದೆ.

Leave a Comment

Your email address will not be published. Required fields are marked *