Ad Widget .

ಪುತ್ತೂರು: ಎಸ್ಎಸ್ಎಲ್ಸಿ ಪರೀಕ್ಷೆ ನಿಗದಿಯಾದ ದಿನವೇ ಕುಸಿಯಿತು ಮನೆ | ಈ ಪರಿಸ್ಥಿತಿಯಲ್ಲಿ ನಾನು ಹೇಗೆ ಓದಲಿ | ವಿದ್ಯಾರ್ಥಿನಿಯ ಅಳಲು

ಪುತ್ತೂರು: ಪರೀಕ್ಷೆ ವೇಳಾಪಟ್ಟಿ ಪ್ರಕಟಗೊಂಡ ದಿನವೇ ಪುತ್ತೂರಿನ ಎಸೆಸೆಲ್ಸಿ ವಿದ್ಯಾರ್ಥಿನಿಯೋರ್ವಳ ಮನೆ ಕುಸಿದಿದ್ದು, ಪರೀಕ್ಷೆ ಸಿದ್ಧತೆ ನಡೆಸಲು ಸಂಕಷ್ಟ ಎದುರಾಗಿದೆ.

Ad Widget . Ad Widget .

ತಾಲೂಕಿನ ಚಿಕ್ಕಮುಂಡ್ಲೂರು ಗ್ರಾಮದ ನಿವಾಸಿ ಗೋಪಾಲ ಶೆಟ್ಟಿ ಎಂಬವರ ಮನೆ ಸೋಮವಾರ ಸಂಜೆ ಮಳೆಗೆ ಶಿಥಿಲಗೊಂಡು ಕುಸಿದಿದೆ. ಬಡವರಾದ ಗೋಪಾಲ ಶೆಟ್ಟಿ ಅವರು ಕಾಲು ನೋವಿನಿಂದ ದುಡಿಯಲು ಸಾಧ್ಯವಿಲ್ಲದೆ ಮನೆಯಲ್ಲೇ ಇದ್ದಾರೆ. ಇವರ ಪತ್ನಿ ಬೀಡಿಕಟ್ಟಿ ಕೂಲಿ ಕೆಲಸ ಮಾಡಿ ಸಿಗುವ ಅಲ್ಪ ಸ್ವಲ್ಪ ಸಂಪಾದನೆಯಲ್ಲಿ ಪತಿಯ ಆರೋಗ್ಯವನ್ನು ನೋಡಿಕೊಂಡು ಮಕ್ಕಳನ್ನು ಸಾಕುತ್ತಿದ್ದಾರೆ.

Ad Widget . Ad Widget .

ಇಬ್ಬರು ಮಕ್ಕಳಲ್ಲಿ ಹಿರಿಯಾಕೆ ಎಸೆಸೆಲ್ಸಿ ವಿದ್ಯಾರ್ಥಿನಿಯಾಗಿದ್ದಾಳೆ. ಎಸ್ಎಸ್ಎಲ್ಸಿ ಪರೀಕ್ಷೆ ಸಮೀಪಿಸಿದ್ದು ಆಕೆಗೆ ಸಿದ್ಧತೆ ನಡೆಸಲು ಇದ್ದೊಂದು ಹಳೆಯ ಮನೆಯು ಬಿದ್ದುಹೋಗಿದೆ. ಪರೀಕ್ಷೆ ಸಮಯದಲ್ಲಿ ಮನೆ ಕುಸಿದಿರುವುದು ಬಡಕುಟುಂಬಕ್ಕೆ ದೊಡ್ಡ ನೋವು ತರಿಸಿ ಬಿಟ್ಟಿದೆ. ಇತ್ತ ಮನೆಯ ಮೇಲ್ಚಾವಣಿಯು ಬೀಳುವ ಹಂತದಲ್ಲಿದೆ. ವಿದ್ಯಾರ್ಥಿನಿ ದೀಕ್ಷಾ ಈ ಪರಿಸ್ಥಿತಿಯಲ್ಲಿ ನಾನು ಹೇಗೆ ಪರೀಕ್ಷೆಗೆ ಸಿದ್ಧತೆ ಮಾಡಲಿ ಎಂದು ಅಳಲು ತೋಡಿಕೊಂಡಿದ್ದಾರೆ.

ಮನೆಯ ಸಂಪೂರ್ಣ ಶಿಥಿಲಗೊಂಡಿರುವುದರಿಂದ ತಾತ್ಕಾಲಿಕವಾಗಿ ಸರಿಪಡಿಸಲು ಸಾಧ್ಯವಿಲ್ಲ. ಆದ್ದರಿಂದ ಸದ್ಯ ಮನೆಯನ್ನು ಪಂಚಾಯತ್ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.

Leave a Comment

Your email address will not be published. Required fields are marked *