ಅಂಗಳದಲ್ಲಿ ಊಟ ಮಾಡುತ್ತಿದ್ದ ಮಗುವಿನ ತಲೆಗೆ ತೆಂಗಿನಕಾಯಿ ಬಿದ್ದು ಮೃತ್ಯು

ಹಾವೇರಿ. ಅಂಗಳದಲ್ಲಿ ಊಟ ಮಾಡುತ್ತಿದ್ದ 11 ತಿಂಗಳ ಮಗುವಿನ ತಲೆ ಮೇಲೆ ತೆಂಗಿನ ಕಾಯಿ ಬಿದ್ದು ಮಗು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಜ್ಯದ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

Ad Widget ... ..

ಅಂಗಳದಲ್ಲಿ ಆಟವಾಡುತ್ತಿದ್ದಾಗ ತಲೆಯ ಮೇಲೆ ಬಿದ್ದ ಪರಿಣಾಮ 11 ತಿಂಗಳ ಮಗು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹಿರೆಕೇರೂರು ತಾಲೂಕಿನ ಹಂಸಭಾವಿಯಲ್ಲಿ ನಡೆದಿದೆ.

Ad Widget

ಹಂಸಭಾವಿಯ ಮಲ್ಲಿಕಾರ್ಜುನ ಮತ್ತು ಮಾಲಾ ದಂಪತಿಗಳ ಮಗು ಮೃತಪಟ್ಟ ಮಗುವಾಗಿದ್ದು, ಮನೆಯ ಎದುರು ಮಗುವನ್ನು ಆಟವಾಡಿಸುತ್ತಾ ಊಟ ಮಾಡಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು ಘಟನೆ ನಡೆದ ತಕ್ಷಣವೇ ಮಗುವನ್ನು ದಾವಣಗೆರೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ನಿನ್ನೆ ರಾತ್ರಿ ಮಗು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ ಎಂದು ವರದಿಯಾಗಿದ್ದು, ಮಗುವನ್ನು ಕಳೆದುಕೊಂಡಿರುವ ಪೋಷಕರ ರೋದನೆ ಮುಗಿಲು ಮುಟ್ಟಿದೆ.

Leave a Comment

Your email address will not be published. Required fields are marked *