Ad Widget .

ಪ್ರೀತಿಯ ಹುಡುಕಿ ಗಡಿ ದಾಟಿದಾತ ಪೊಲೀಸರ ಅತಿಥಿಯಾದ

ಬಾಂಗ್ಲಾದೇಶ: ಭಾರತೀಯ ಮೂಲದ ಯುವಕನೊಬ್ಬ ತನ್ನ ಫೇಸ್’ಬುಕ್ ಪ್ರೇಮಿಯನ್ನು ಹುಡುಕಿಕೊಂಡು ಬಾಂಗ್ಲಾ ಗಡಿ ದಾಟಿ ಹೋಗಿ ಅಲ್ಲಿಯ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ.

Ad Widget . Ad Widget .

ದಿನದವಿಡಿ ಮೊಬೈಲ್ ನಲ್ಲೇ ಕಾಲ ಕಳೆಯುತ್ತಿದ್ದ ಯುವಕನಿಗೆ ಫೇಸ್ ​ಬುಕ್’ನಲ್ಲಿ ಬಾಂಗ್ಲಾ ಮೂಲದ ಯುವತಿಯ ಪರಿಚಯವಾಗಿದೆ. ​ ಪರಿಚಯ ಪ್ರೀತಿಗೆ ತಿರುಗಿ ಮದುವೆ ಮಾತುಕಥೆಯೂ ಫೇಸ್​ಬುಕ್​ನಲ್ಲೇ ನಿರ್ಧಾರ ಮಾಡಿಕೊಂಡಿದ್ದ.

Ad Widget . Ad Widget .

ಈತ ಹೇಗಾದರೂ ಆಕೆಯನ್ನ ಭೇಟಿ ಮಾಡಲೇಬೇಕೆಂಬ ಹಠಕ್ಕೆ ಬಿದ್ದು ಬಾರ್ಡರ್​ ದಾಟಲು ನಿರ್ಧರಿಸಿದ್ದಾನೆ.

ಅದರಂತೆ ಎಲ್ಲರ ಕಣ್ಣು ತಪ್ಪಿಸಿ ಗಡಿ ದಾಟಿದ ಯುವಕ ಪ್ರೇಯಸಿಯ ಬಿಗಿದಪ್ಪಿಕೊಂಡ ಮರುಕ್ಷಣವೇ ಪೊಲೀಸರ ಅತಿಥಿಯಾಗಿದ್ದಾನೆ. ಪೊಲೀಸರು ಅಕ್ರಮವಾಗಿ ಗಡಿದಾಟಿದ ಆರೋಪದ ಮೇಲೆ ಇಬ್ಬರನ್ನೂ ಬಂಧಿಸಿದ್ದಾರೆ.

Leave a Comment

Your email address will not be published. Required fields are marked *