Ad Widget .

ಆಷಾಡ ಮಾಸದಲ್ಲೇಕೆ ದಂಪತಿಗಳು ದೂರ ಇರ್ತಾರೆ ಗೊತ್ತಾ?. ಇಲ್ಲಿನ ಶಾಸ್ತ್ರ ಹಾಗೂ ವೈಜ್ಞಾನಿಕ ಕಾರಣಗಳು.

ಹಿಂದೂ ಧರ್ಮ ಹಲವು ಸಾಂಸ್ಕೃತಿಕ ಆಚರಣೆಗಳನ್ನು ತನ್ನ ಉದರದಲ್ಲಿಟ್ಟುಕೊಂಡು ಜಗತ್ತಿನ ಗಮನ ಸೆಳೆಯುತ್ತಿದೆ. ಹಲವು ವಿದೇಶಿ ವಿದ್ವಾಂಸರು ಸಂಸ್ಕೃತಿಯೇ ಹಿಂದೂ ಧರ್ಮ ಎಂದು ವ್ಯಾಖ್ಯಾನ ಮಾಡಿದ್ದಾರೆ. ಅಲ್ಲದೇ ಹಿಂದೂ ಧರ್ಮದಲ್ಲಿ ಹಲವು ಧಾರ್ಮಿಕ ನಂಬಿಕೆಗಳು, ಆಚರಣೆಗಳು ಅಸ್ತಿತ್ವದಲ್ಲಿವೆ. ಅವು ಜನರ ಸಾಮಾಜಿಕ ಜೀವನದ ಭಾಗವೇ ಆಗಿವೆ.

Ad Widget . Ad Widget .

ಇಂತಹ ನಂಬಿಕೆಗಳಲ್ಲಿ ಕಾಲನ ಚಲನೆಯನ್ನು ತಿಳಿಸುವ 12 ಮಾಸಗಳು ಸಹ ಸೇರುತ್ತವೆ. ಸೌರಮಾನದ ಮಾಸಗಳಲ್ಲಿ ಆಷಾಢ ನಾಲ್ಕನೇ ಮಾಸವಾಗಿದ್ದು, ಇದು ಸಾಮಾನ್ಯವಾಗಿ ಜುಲೈ ಹಾಗೂ ಆಗಸ್ಟ್​ನಲ್ಲಿ ಪ್ರಾರಂಭವಾಗುತ್ತದೆ. ಈ ಮಾಸವನ್ನು ಹಿಂದೂಗಳು ಅಶುಭ ಮಾಸ ಎಂದೇ ಪರಿಗಣಿಸುತ್ತಾರೆ.

Ad Widget . Ad Widget .

ಈ ಮಾಸದಲ್ಲಿ ಗೃಹ ಪ್ರವೇಶ, ಮದುವೆ ಹಾಗೂ ಇನ್ನಿತರ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಅಲ್ಲದೇ ಈ ಮಾಸದಲ್ಲಿ ಕೆಲವು ಸಾಂಸ್ಕೃತಿಕ ನಂಬುಗೆಗಳನ್ನು ಸಹ ಆಚರಣೆಗೆ ತರುತ್ತಾರೆ. ಅಂತಹ ನಂಬುಗೆಗಳಲ್ಲಿ ಹೊಸದಾಗಿ ಮದುವೆಯಾದವರು ಪರಸ್ಪರ ಸೇರಬಾರದು ಎನ್ನುವುದು ಕೂಡ ಒಂದು. ಈ ಸಂಪ್ರದಾಯವನ್ನು ದಕ್ಷಿಣ ಭಾರತದ ರಾಜ್ಯಗಳಾದ ಆಂಧ್ರಪ್ರದೇಶ, ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನಲ್ಲಿ ಕಾಣಬಹುದು.

ಈ ಸಾಂಪ್ರದಾಯಿಕ ಆಚರಣೆಯನ್ನು ಪ್ರೇಮ ಕವಿ ಕೆ.ಎಸ್​ ನರಸಿಂಹಸ್ವಾಮಿ ತಮ್ಮ ಕವನದಲ್ಲಿ ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಹೊಸದಾಗಿ ಮದುವೆಯಾದ ಹೆಣ್ಣು ಗಂಡನನ್ನು ತೊರೆದ ವಿರಹದಲಿ ತವರಿನಿಂದ ಪತ್ರ ಬರೆದು “ಬಂದು ಬಿಡುವೆನು ಬೇಗ, ಮುನಿಯದಿರಿ, ಕೊರಗದಿರಿ” ಎಂದು ತಿಳಿಸುತ್ತಾಳೆ. ವಸಂತ ಹೊಸ ಹುಟ್ಟು ಪಡೆಯುವ ಕಾಲದಲ್ಲಿ ಹೊಸದಾಗಿ ಮದುವೆಯಾಗುವ ದಂಪತಿಗಳು ಸಹ ಒಂದಷ್ಟು ಹೊಸ ಆಸೆಗಳನ್ನು ಇಟ್ಟುಕೊಂಡಿರುತ್ತಾರೆ. ಮದುವೆಯಾದ ಹೊಸತರಲ್ಲಿ ಸೆಕ್ಸ್​​ ಬಗ್ಗೆ ತಮ್ಮದೇ ಆದ ಹಲವು ಕಲ್ಪನೆ, ಆಸೆ, ಸಂಗಾತಿಯನ್ನು ಸೇರುವ ತವಕ ಚೂರು ಹೆಚ್ಚೇ ಇರುತ್ತೆ ಎನ್ನಬಹುದು.

ಆದರೆ ಈ ಸಾಂಪ್ರದಾಯಿಕ ಆಚರಣೆ ನೂತನ ದಂಪತಿಗಳನ್ನು ಅಗಲಿಸಿ ಬಿಡುತ್ತದೆ. ಗಂಡ ಸುರಿಯುವ ಮುಂಗಾರಿನ ಪೂರಕ ವಾತಾವರಣದಲ್ಲಿ ಹೆಂಡತಿಯ ಸಖ್ಯವನ್ನು ಬಯಸುತ್ತಾನೆ. ತನ್ನ ಅಂತರಂಗದಲ್ಲಿ ಬಚ್ಚಿಟ್ಟ ಜೀವ ಜಲವನ್ನು, ಭೂಮಿಯ ಒಡಲಿಗೆ ಹರಿಸುವ ಆಸೆ ಗಂಡನಿಗೆ ತುಂಬಿ ಬಂದಿದ್ದರೆ, ಆಷಾಢದ ಅಗಲುವಿಕೆಯಲ್ಲಿ ರಾಯನ ಕನಸು ಕಾಣುತ್ತ ತವರಲ್ಲಿ ತನ್ನವರ ಸಖ್ಯದಲ್ಲಿ ಇರುತ್ತಾಳೆ ಪತ್ನಿ.

ಆಷಾಢದಲ್ಲಿ ಗಂಡ ಹೆಂಡತಿಯರನ್ನು ಬೇರ್ಪಡಲು ಈ ಕಾರಣಗಳಿವೆ. ಈ ಮಾಸದಲ್ಲಿ ಹೊಸದಾಗಿ ಮದುವೆಯಾದ ಗಂಡು-ಹೆಣ್ಣು ಸಂಭೋಗ ಮಾಡಿದರೆ, ಉರಿ ಬಿಸಿಲಿನ ತಿಂಗಳುಗಳಾದ ಏಪ್ರೀಲ್​-ಮೇ ತಿಂಗಳಲ್ಲಿ ಹೆಣ್ಣು ಗರ್ಭ ಧರಿಸುತ್ತಾಳೆ. ಇದರಿಂದ ಚೊಚ್ಚಲ ಹೆರಿಗೆಗೆ ತೊಂದರೆಯಾಗುವುದಲ್ಲದೇ ಹುಟ್ಟುವ ಮಗುವಿಗೂ ತೊಂದರೆಯಾಗುತ್ತದೆ ಎನ್ನುವ ನಂಬಿಕೆ. ಎಸಿ, ಫ್ಯಾನ್, ಕಾಂಡೋಮ್​ ಕಾನ್ಸೆಪ್ಟೇ ಇಲ್ಲದ ಅಂದಿನ ಕಾಲದಲ್ಲಿ ಇದು ಸಹಜ ಸಹ.

ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ಸರಿಯಾಗಿ ಈ ಸಮಯದಲ್ಲಿ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಸಾಕಷ್ಟು ಸಮಯ ಬಯಸುವ ಕಾರ್ಯಕ್ರಮಗಳನ್ನು ಏರ್ಪಡಿಸುವುದಿಲ್ಲ. ಅಲ್ಲದೇ ಈ ಕಾಲದಲ್ಲಿ ಸದಾ ಗಂಡನೊಂದಿಗಿರುವುದು ಹೆಣ್ಣಿನ ಶಾರೀರಿಕ ಹಾಗೂ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎನ್ನಲಾಗಿದೆ.

ಮಾನ್ಸೂನ್ ತಿಂಗಳುಗಳು ವರ್ಷದಲ್ಲಿಯೇ ದುರ್ಬಲವಾದ ತಿಂಗಳುಗಳಾಗಿರುತ್ತವೆ. ಮುಂಗಾರು ಮಳೆಯ ಕಾರಣ ವಾತಾವರಣದಲ್ಲಿ ಬದಲಾವಣೆ ಉಂಟಾಗುತ್ತದೆ. ಮಾನ್ಸೂನ್ ನೀರು ಮತ್ತು ಗಾಳಿಯ ಮೂಲಕ ಹಲವು ರೋಗಗಳನ್ನು ಹರಡುತ್ತದೆ. ಈ ತಿಂಗಳಿನಲ್ಲಿ ಸಂಭೋಗ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು ಎನ್ನುವುದು ಕೂಡ ಒಂದು ಕಾರಣ.

ಈ ತಿಂಗಳ ಆರಂಭದಲ್ಲಿ ಉತ್ತರ ಗೋಳಾರ್ಧದಿಂದ ದಕ್ಷಿಣದ ಕಡೆಗೆ ಸೂರ್ಯ ತನ್ನ ಪ್ರಯಾಣವನ್ನು ಆರಂಭಿಸುತ್ತಾನೆ. ಆದ್ದರಿಂದ ಜನರು ರಾಮಾಯಣ ಮತ್ತು ಇತರ ಧರ್ಮಗ್ರಂಥಗಳನ್ನು ಓದಿ ದಿನಗಳನ್ನು ಕಳೆಯುತ್ತಾರೆ ಮತ್ತು ಧ್ಯಾನದಲ್ಲಿ ಸಮಯ ಕಳೆಯುತ್ತಾರೆ. ತಮ್ಮ ದೇಹ ಮತ್ತು ಮನಸ್ಸನ್ನು ಬಲಪಡಿಸಲು ಮತ್ತು ಪ್ರತಿರಕ್ಷಿಸಲು ಔಷಧಿ, ಆಹಾರ ಮತ್ತು ಪಾನೀಯಗಳನ್ನು ತೆಗೆದುಕೊಳ್ಳುತ್ತಾರೆ. ಅವರು ಸೂರ್ಯ ದೇವರಿಗೆ ವಿಶೇಷ ಅರ್ಪಣೆಗಳನ್ನು ಅರ್ಪಿಸುತ್ತಾರೆ. ಆದ ಕಾರಣ ದೈಹಿಕ ಸಂಬಂಧದಿಂದ ದೂರವಿರುತ್ತಾರೆ.

Leave a Comment

Your email address will not be published. Required fields are marked *