Ad Widget .

ಮೀನು ಸಾಗಾಟದ ಕಂಟೈನರ್ ನಲ್ಲಿ 3 ಟನ್ ಗೋಮಾಂಸ ಪತ್ತೆ

ಕುಮಟಾ: ಮೀನಿನ ಬಾಕ್ಸ್’ಗಳಲ್ಲಿ ಇರಿಸಿ ಬರೋಬ್ಬರಿ ಮೂರು ಟನ್ ಗಿಂತಲೂ ಹೆಚ್ಚು ಗೋಮಾಂಸ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಕುಮಟಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.

Ad Widget . Ad Widget .

ಕುಮಟದ ಹೊಳೆಗದ್ದೆ ಟೋಲ್ ಗೇಟ್ ನಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುವಾಗ ಅಕ್ರಮ ಗೋ ಮಾಂಸ ಸಾಗಟ ಮಾಡುತ್ತಿರುವುದು ಕಂಡು ಬಂದಿದೆ. ಕಂಟೈನರ್ ಚಾಲಕ ಮಹಮ್ಮದ್ ಶಾಹಿದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಹಾನಗಲ್ ನಿಂದ ಮಂಗಳೂರಿಗೆ ಗೋ ಮಾಂಸ ಸಾಗಿಸುತ್ತಿರುವುದಾಗಿ ಆತ ಹೇಳಿದ್ದಾನೆ. ಆತನ ಹೇಳಿಕೆಯಿಂದ ಮಂಗಳೂರಿನಲ್ಲಿ ಗೋ ಮಾಂಸ ಮಾರಾಟದ ಅಷ್ಟು ದೊಡ್ಡ ವ್ಯವಹಾರವಿದೆಯಾ ಎಂಬ ಆತಂಕ ಜನರಲ್ಲಿ ಮೂಡಿದೆ.

Ad Widget . Ad Widget .

ಯಾರಿಗೂ ಅನುಮಾನ ಬರದಂತೆ ಮೀನಿನ ಬಾಕ್ಸ್ ಗಳಲ್ಲಿ ಐಸ್ ತುಂಡುಗಳ ಜೊತೆ ಮಾಂಸವನ್ನು ಇಟ್ಟು ಮೀನು ಸಾಗಾಟದ ರೀತಿಯಲ್ಲಿ ಸಾಗಿಸಲಾಗುತ್ತಿತ್ತು. ತಪಾಸಣೆ ನಿರತ ಪೊಲೀಸರು ಅನುಮಾನದ ಮೇರೆಗೆ ಬಾಕ್ಸ್ಗಳನ್ನು ಪರಿಶೀಲಿಸಿದ್ದು ಪ್ರಕರಣ ಬೆಳಕಿಗೆ ಬಂದಿದೆ.

Leave a Comment

Your email address will not be published. Required fields are marked *