Ad Widget .

ಪಾಕೆಟ್ ನಲ್ಲಿ ಮೊಬೈಲ್ ಇಟ್ಕೋತೀರಾ? | ಹಾಗಾದ್ರೆ ಈ ಸ್ಟೋರಿ ಓದ್ಲೇಬೇಕು | ತಜ್ಞರ ವರದಿಯಲ್ಲಿ ಏನಿದೆ ಗೊತ್ತಾ?

ನವದೆಹಲಿ : ಸಧ್ಯ ಮೊಬೈಲ್ ನಮ್ಮ ಜೀವನದ ಅತ್ಯಂತ ಪ್ರಮುಖ ಭಾಗವಾಗಿದೆ. ನಾವು ಎಲ್ಲಾದಕ್ಕೂ ಫೋನ್ ಅವಲಂಭಿಸಿದ್ದೇವೆ. ಊಟ ಮಾಡುವಾಗ, ಟಾಯ್ಲೆಟ್ ಹೋಗುವಾಗ, ಕುಳಿತಾಗ, ನಿದ್ರೆ ಮಾಡುವಾಗ ಮೊಬೈಲ್ ಹತ್ತಿರ ಇರಲೇ ಬೇಕು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಆದರೆ ಇದರಿಂದ ಕಣ್ಣಿನ ದೃಷ್ಟಿ ಮತ್ತು ಕಳಪೆ ಭಂಗಿಯ ಸಮಸ್ಯೆಗಳನ್ನು ಉಂಟುಮಾಡಬಹುದು. ಜೊತೆಗೆ ಪುರುಷರ ಲೈಂಗಿಕ ಜೀವನದ ಮೇಲೆಯೂ ಪರಿಣಾಮ ಬೀರಬಹುದು.

Ad Widget . Ad Widget . Ad Widget .

ಸ್ಮಾರ್ಟ್ ಫೋನ್ ನ ಹಾನಿಕಾರಕ ಪರಿಣಾಮಗಳು: ಮೊಬೈಲ್(Mobile) ನಿಂದ ಹೊರಹೊಮ್ಮುವ ವಿದ್ಯುತ್ಕಾಂತೀಯ ವಿಕಿರಣವು (ಎಲೆಕ್ಟ್ರೋ ಮ್ಯಾಗ್ನೆಟಿಕ್ ರೇಡಿಯೇಷನ್) ನಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂದು ಹಲವಾರು ಅಧ್ಯಯನಗಳು ತಿಳಿಸಿವೆ.

ಹಾಗಿದ್ದರೆ ಎಲ್ಲೆಲ್ಲಿ ಫೋನ್ ಇಟ್ಟುಕೊಳ್ಳಬಾರದು? ಇಲ್ಲಿ ಓದಿ..

1. ಪುರುಷರಲ್ಲಿ ಅಡ್ಡ ಪರಿಣಾಮಗಳು: ವಿಶೇಷವಾಗಿ ಪುರುಷ(Men)ರು ಪ್ಯಾಂಟ್ ಅಥವಾ ಜೀನ್ಸ್ ನ ಮುಂಭಾಗದ ಜೇಬಿನಲ್ಲಿ ಸ್ಮಾರ್ಟ್ ಫೋನ್ ಅನ್ನು ಇಟ್ಟುಕೊಳ್ಳಬಾರದು. ಇದರಿಂದಾಗಿ ಅವರ ವೀರ್ಯಾಣುಗಳ ಸಂಖ್ಯೆ ಮತ್ತು ವೀರ್ಯಾಣುಗಳ ಗುಣಮಟ್ಟವು ತೀವ್ರವಾಗಿ ಕುಸಿಯುತ್ತದೆ. ಇದು ಯಾವುದೇ ಪುರುಷನ ಲೈಂಗಿಕ ಆರೋಗ್ಯವನ್ನು ಹಾಳುಮಾಡುವ ಮೂಲಕ ಬಂಜೆತನಕ್ಕೆ ಕಾರಣವಾಗಬಹುದು.

2. ಪಾಕೆಟ್ ಬ್ಯಾಕ್ : ಪ್ಯಾಂಟ್ ಅಥವಾ ಜೀನ್ಸ್ ನ ಹಿಂದಿನ ಜೇಬಿನಲ್ಲಿ ಸ್ಮಾರ್ಟ್ ಫೋನ್(Smartphone) ಅನ್ನು ಇಟ್ಟುಕೊಳ್ಳುವುದರಿಂದ ನಿಮಗೆ ಸಯಾಟಿಕಾ ನರನೋವಿನ ಸಮಸ್ಯೆ ಉಂಟಾಗಬಹುದು. ಇದು ಸೊಂಟದ ಕೆಳಭಾಗದಿಂದ ಸೊಂಟ ಮತ್ತು ಕಾಲಿನ ನೋವು ಉಂಟು ಮಾಡಬಹುದು. ಇದರಿಂದಾಗಿ ನೀವು ಕುಳಿತುಕೊಳ್ಳುವಲ್ಲಿ ಅಥವಾ ನಡೆಯುವಲ್ಲಿ ತುಂಬಾ ನೋವನ್ನು ಅನುಭವಿಸಬಹುದು.

3. ಶರ್ಟ್ ಪಾಕೆಟ್ : ಕೆಲವರು ತಮ್ಮ ಸ್ಮಾರ್ಟ್ ಫೋನ್ ಅನ್ನು ತಮ್ಮ ಶರ್ಟ್ ಜೇಬಿ(Shirt Pocket)ನಲ್ಲಿ ಇಟ್ಟುಕೊಳ್ಳುತ್ತಾರೆ . ಫೋನ್ ಅನ್ನು ಈ ಸ್ಥಳದಲ್ಲಿ ಇಡುವ ಮೂಲಕ ಅದರಿಂದ ಹೊರಹೊಮ್ಮುವ ಹಾನಿಕಾರಕ ವಿದ್ಯುತ್ಕಾಂತೀಯ ವಿಕಿರಣವು ನಿಮ್ಮ ಹೃದಯವನ್ನು ದುರ್ಬಲಗೊಳಿಸಬಹುದು. ಅದರಲ್ಲೂ ಅಧಿಕ ರಕ್ತದೊತ್ತಡರೋಗಿಗಳು, ಮಧುಮೇಹಿಗಳು ಮತ್ತು 40 ವರ್ಷ ಮೇಲ್ಪಟ್ಟವರು ತಮ್ಮ ಶರ್ಟ್ ಜೇಬಿನಲ್ಲಿ ಸ್ಮಾರ್ಟ್ ಫೋನ್ ಇಟ್ಟುಕೊಳ್ಳಬಾರದು. ಆದಷ್ಟು ಮೊಬೈಲ್ ಅನ್ನು ಬ್ಯಾಗ್ ನೊಳಗಡೆ ಅಥವಾ ಬೇರೆ ಅನುಕೂಲಕರ ಜಾಗಗಳಲ್ಲಿ ಇಡೋದ್ರಿಂದ ಅದರಿಂದ ದೇಹದ ಮೇಲಾಗುವ ಕೆಟ್ಟ ಪರಿಣಾಮ ಕಡಿಮೆ ಮಾಡಿಕೊಳ್ಳಲು ಸಾಧ್ಯ.

Leave a Comment

Your email address will not be published. Required fields are marked *