Ad Widget .

‘ಮಂಗಳೂರಿನವರ ಸೊಕ್ಕು ಮುರಿಯಬೇಕು | ಧರ್ಮಸ್ಥಳ, ಸುಬ್ರಹ್ಮಣ್ಯ ಹೋಗುವುದನ್ನು ನಿಲ್ಲಿಸಬೇಕು |ಜಾಲತಾಣದಲ್ಲಿ ಇಂತಹದೊಂದು ಆಡಿಯೋ ವೈರಲ್

ಮಂಗಳೂರು: ಟ್ರೆಂಡಿಂಗ್‌ನಲ್ಲಿ ಇರುವ ಕ್ಲಬ್ ಹೌಸ್ ಅಪ್ಲಿಕೇಶನ್ ನಲ್ಲಿ ಮಂಗಳೂರಿಗರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆಡಿಯೋ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

Ad Widget . Ad Widget .


ಇತ್ತಿಚೀನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೇಂಡಿಂಗ್‌ನಲ್ಲಿರುವುದೇ ಕ್ಲಬ್ ಹೌಸ್. ಫೇಸ್‌ಬುಕ್, ವಾಟ್ಸ್‌ಪ್, ಇನ್ ಸ್ಟಾ ಗ್ರಾಂ ಮಾದರಿಯಲ್ಲೇ ಜನರನ್ನು ಸೆಲೆದಂತಹ ಆಪ್. ಅದರೆ ಇದರಲ್ಲಿ ಯಾವದೇ ಪೋಸ್ಟ್ ಹಾಕಲು ಸಾಧ್ಯವಿಲ್ಲ. ಗೂಗಲ್ ಮೀಟ್, ಝೂಮ್ ನಲ್ಲಿ ವಿಡಿಯೋ ಮೂಲಕ ಸಂವಹನ ಮಾಡಬಹುದು. ಆದರೆ ಈ ಅಪ್ಲಿಕೇಶನ್‌ಗಳಲ್ಲಿ ಪ್ರಪಂಚದ ಎಲ್ಲ ಜನರ ಜೊತೆ ಸುಲಭವಾಗಿ ಹರಟೆ, ಚರ್ಚೆಯನ್ನು ವಿಡಿಯೋ ಇಲ್ಲದೆ ಕೇವಲ ಆಡಿಯೋದಲ್ಲಿ ಮಾತ್ರ ಮಾಡಬಹುದಾಗಿದೆ.

Ad Widget . Ad Widget .


ಇದೀಗ ಈ ಕ್ಲಬ್ ಹೌಸ್‌ನಲ್ಲಿ ಕರಾವಳಿಗರನ್ನು ಕಡೆಗಣಿಸುವ ಕೆಲವು ಚರ್ಚೆಗಳಿಂದ ಕುಡದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ‘ನಮ್ಮೂರಲ್ಲಿ ದೇವಸ್ಥಾನಗಳಿಲ್ವಾ, ನಮಗೆ ಮನೆ ದೇವರಿಲ್ಲವೇ. ಅದನ್ನು ಬಿಟ್ಟು ಧರ್ಮಸ್ಥಳ, ಸುಬ್ರಹ್ಮಣ್ಯ ಹೋಗುವುದನ್ನು ಮೊದಲು ನಿಲ್ಲಿಸಬೇಕು. ಕರಾವಳಿ ಕಡೆಗೆ ಟ್ರಿಪ್ ಹೋಗುವುದನ್ನು ಎಲ್ಲಿಯವರೆಗೆ ನಿಲ್ಲಿಸುವುದಿಲ್ಲ, ಅಲ್ಲಿಯವರೆಗೆ ಮಂಗಳೂರಿಗರ ಸೊಕ್ಕು ಮುರಿಯುವುದಿಲ್ಲ. ಮಂಗಳೂರಿಗರ ಸೊಕ್ಕು ಮುರಿಯಬೇಕು ಎಂದು ಕರುನಾಡು-ತುಳುನಾಡು ಎಂಬ ಕ್ಲಬ್ ಹೌಸ್‌ನಲ್ಲಿ ನಡೆಯುತ್ತಿದ್ದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


‘ಕನ್ನಡ ವಾಹಿನಿಗಳಲ್ಲಿ ಕರಾವಳಿಗರು ಮೆರೆಯುತ್ತಿದ್ದಾರೆ. ಯಾವಾಗ ಅನುಶ್ರೀ ಝೀ ಕನ್ನಡಕ್ಕೆ ಬಂದರೋ ಅಂದಿನಿಂದ ಕನ್ನಡ ವಾಹಿನಿಗಳಲ್ಲಿ ತುಳುನಾಡಿನವರು ತುಂಬಿಕೊಂಡಿದ್ದಾರೆ. ಅವರನ್ನು ಮೊದಲು ಹೊರಗಿಡಬೇಕು ಎಂದು ಶರತ್ ಕುಮಾರ್ ಎಂಬಾತ ಕ್ಲಬ್ ಹೌಸ್‌ನಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ್ದಾನೆ.


ಮಂಜುನಾಥ ಸ್ವಾಮಿ ದೇವಸ್ಥಾನ ನಿಮ್ಮಲ್ಲೇ ಕಟ್ಟಿಕೊಳ್ಳಿ ಸಾರ್ ಯಾರು ಬೇಡ ಅಂತಾರೆ. ಅದು ಬಿಟ್ಟು ಕರಾವಳಿಗೆ ಯಾಕೆ ಹೋಗ್ತೀರಾ ಎಂದು ಪ್ರಶ್ನಿಸಿದ್ದಾನೆ. ಹೀಗೆ ಕರಾವಳಿಗರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆಡಿಯೋ ವೈರಲ್ ಆಗುತ್ತಿದೆ. ಈ ಆಡಿಯೋ ಬಗ್ಗೆ ಕರಾವಳಿಗರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Comment

Your email address will not be published. Required fields are marked *