Ad Widget .

ಮಹಿಳೆಯರನ್ನು ಎಳೆದಾಡಿ ಭೂತ ಬಿಡಿಸುತ್ತಿದ್ದವರನ್ನು ಹಿಡಿದು ಭೂತ ಬಿಡಿಸಲು ಕರೆದೊಯ್ದ ಪೊಲೀಸರು

ಪ್ರಯಾಗ್​ರಾಜ್​: ಮೈಮೇಲೆ ಬಂದ ದುಷ್ಟ ಶಕ್ತಿ ಬಿಡಿಸುತ್ತೇವೆ ಎಂದು ಹೇಳಿ ಮಹಿಳೆಯರನ್ನು ಹಿಡಿದು ಎಳೆದಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ.

Ad Widget . Ad Widget .

ಮಹಿಳೆಯರ ಮೈ ಮುಟ್ಟಿ, ಡ್ರಂಗಳನ್ನು ಬಾರಿಸುತ್ತಾ ಭೂತವನ್ನು ಬಿಡಿಸುತ್ತಿದ್ದ 30ಮಂದಿಯನ್ನು ಪ್ರಯಾಗ್​ರಾಜ್​ ಸಂಗಂ ನದಿಯ ತೀರದಿಂದ ಬಂಧಿಸಲಾಗಿದೆ.

Ad Widget . Ad Widget .

ಬಂಧಿತರು ಮಹೋಬಾ ಮತ್ತು ಛತ್ತರಪುರ ಜಿಲ್ಲೆಗಳ ನಿವಾಸಿಗಳು ಎನ್ನಲಾಗಿದೆ. ಇವರು ಭೂತ ಬಿಡಿಸುವ ನೆಪ ಹೇಳಿ ಮಹಿಳೆಯರನ್ನು ನದಿ ತೀರಕ್ಕೆ ಕರೆತಂದು ಮೈಮುಟ್ಟಿ , ಕೂದಲು ಹಿಡಿದು ಎಳೆದಾಡಿ ಬೆತ್ತದಿಂದ ಹೊಡೆದು ಹಿಂಸೆ ನೀಡುತ್ತಿದ್ದರು. ನಿಂಬೆಹಣ್ಣು ಹಿಡಿದುಕೊಂಡು ಕುಂಕುಮ ಎರಚಿ ದುಷ್ಟ ಶಕ್ತಿಗಳನ್ನು ಓಡಿಸುವುದಾಗಿ ಹೇಳುತ್ತಿದ್ದರು.

ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಒಟ್ಟು 30ಜನರನ್ನು ವಶಕ್ಕೆ ಪಡೆದಿದ್ದಾರೆ.

Leave a Comment

Your email address will not be published. Required fields are marked *