Ad Widget .

ಕುಂದಾಪುರ: ಅಕ್ರಮ ಕಸಾಯಿಖಾನೆಗೆ ದಾಳಿ | 23 ಗೋವುಗಳ ರಕ್ಷಣೆ

ಕುಂದಾಪುರ: ಮೇಯಲು ಬಿಟ್ಟ ದನಗಳನ್ನು ಕದ್ದು ಮಾಂಸಕ್ಕಾಗಿ ಕೂಡಿಟ್ಟಿದ್ದ 23 ದನಗಳನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಮತ್ತು ಕುಂದಾಪುರ ಪೊಲೀಸರು ರಕ್ಷಣೆ ಮಾಡಿದ್ದಾರೆ.

Ad Widget . Ad Widget .

Ad Widget . Ad Widget .

ತಾಲೂಕಿನಲ್ಲಿ ಮೇಯಲು ಬಿಟ್ಟ ದನಗಳ ಸರಣಿ ಕಳ್ಳತನವಾಗುತ್ತಿತ್ತು. ಈ ಹಿನ್ನಲೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಗೋ ಕಳ್ಳತನವಾಗುತ್ತಿರುವುದರ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ಭಾನುವಾರ ದನ ಕಳ್ಳನ ಬಗ್ಗೆ ಮಾಹಿತಿ ಪಡೆದ ಕಾರ್ಯಕರ್ತರು ಕುಂದಾಪುರ ಗ್ರಾಮಾಂತರ ಠಾಣೆಗೆ ತಿಳಿಸಿದ್ದಾರೆ. ನಂತರ ಪೋಲೀಸರ ನೆರವಿನಿಂದ ಗುಳ್ವಾಡಿ ನಿವಾಸಿ ಅಬೂಬಕ್ಕರ್ ಎಂಬವರ ಮನೆಗೆ ದಾಳಿ ಮಾಡಿದ್ದಾರೆ.

ಈ ಸಂದರ್ಭ ಮನೆಯಲ್ಲಿ ಮಾಂಸಕ್ಕಾಗಿ ದನಗಳನ್ನು ಕೂಡಿ ಹಾಕಿರುವುದು ಕಂಡುಬಂದಿದ್ದು, ಅವುಗಳನ್ನು ರಕ್ಷಿಸಲಾಗಿದೆ. ದಾಳಿಯ ವೇಳೆ ಆರೋಪಿ ಅಬೂಬಕ್ಕರ್ ಸ್ಥಳದಿಂದ ಪರಾರಿಯಾಗಿದ್ದಾನೆ. ಆರೋಪಿಯ ಪತ್ತೆ ಕಾರ್ಯ ನಡೆಯುತ್ತಿದೆ.

Leave a Comment

Your email address will not be published. Required fields are marked *