Ad Widget .

ಜೈ ತುಳುನಾಡ್ ಸಂಘಟನೆಯಿಂದ ತುಳು ಭಾಷೆಯನ್ನು ಅಧಿಕೃತ ಮಾಡುವಂತೆ ಕೇರಳ ಸರ್ಕಾರಕ್ಕೆ ಮನವಿ

ಕಾಸರಗೋಡು: ತುಳುನಾಡಿನ ಆಚಾರ ವಿಚಾರ ಲಿಪಿ ಸಂಸ್ಕ್ರತಿ ಮತ್ತು ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿಯುತ ಕೆಲಸ ಕಾರ‍್ಯಗಳನ್ನು ನಿಸ್ವರ‍್ಥವಾಗಿ ಮಾಡಲು ಯುವಕರು ಹಾಗೂ ಹಿರಿಯರು ಒಗ್ಗೂಡಿಕೊಂಡು ಒಂದಾಗಿರುವ ಸಂಘಟನೆ ‘ಜೈ ತುಳುನಾಡ್ ಸಂಘಟನೆ’ ಇದರ ಕಾಸರಗೋಡು ಘಟಕದಿಂದ ಘಟಕದ ಅಧ್ಯಕ್ಷ ಹರಿಕಾಂತ್ ಕಾಸರಗೋಡು ಇವರ ಮುಂದಾಳುತ್ವದಲ್ಲಿ, ಕೇರಳ ರಾಜ್ಯದಲ್ಲಿ ತುಳು ಬಾಷೆ ಯನ್ನು ಅಧಿಕೃತ ಭಾಷೆಯನ್ನಾಗಿ ಮಾಡುವ ಬೇಡಿಕೆಯನ್ನು ಸರಕಾರದ ಗಮನಕ್ಕೆ ತರಬೇಕು ಎಂದು ಶಾಸಕರ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದ್ದಾರೆ.

Ad Widget . Ad Widget .

ದಾಖಲೆಯ ಜೊತೆಗಿರುವ ಮನವಿಯನ್ನು ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ ಹಾಗೂ ಕ್ಷೇತ್ರದ ಪ್ರಸ್ತುತ ಶಾಸಕರಾದ ಸಿ ಯೆಚ್ ಕುಂಞಂಬುರವರಿಗೂ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಘಟಕದ ಸದಸ್ಯರ ಜೊತೆ ಮಾತನಾಡಿದ ಶಾಸಕ ಕೆ ಎಂ ಅಶ್ರಫ್ ಮುಂಬರುವ ಅಧಿವೇಶನದಲ್ಲಿ ಈ ವಿಷಯವನ್ನು ಸರಕಾರದ ಗಮನಕ್ಕೆ ತಂದು ಮನವರಿಕೆ ಮಾಡುವುದಾಗಿ ಭರವಸೆ ನೀಡಿದರು ಹಾಗೂ ಉದುಮ ಶಾಸಕ ಸಿ.ಎಚ್ ಕುಂಞಂಬು ಮಾತನಾಡಿ ತುಳು ಭಾಷೆಯನ್ನು ಕೇರಳದ ಅಧಿಕೃತ ಭಾಷೆಯನ್ನಾಗಿ ಮಾಡುವ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಪ್ರಯತ್ನಿಸುವುದಾಗಿ ಎಂದು ಭರವಸೆ ನೀಡಿದರು.

Ad Widget . Ad Widget .

ಈ ಸಂದರ್ಭ ಜೈ ತುಳುನಾಡ್ ಕಾಸರಗೋಡು ಘಟಕದ ಅಧ್ಯಕ್ಷ ಹರಿಕಾಂತ್ ಕಾಸರಗೋಡು, ಕಾರ್ಯದರ್ಶಿ ಕಾರ್ತಿಕ್ಕೋ ಪೆರ್ಲ, ಕೋಶಾಧಿಕಾರಿ ಪ್ರಶಾಂತ್ ರೈ ಬಂದಡ್ಕ, ಮುಖ್ಯ ಸಂಚಾಲಕ ಪ್ರವೀಶ್ ಕುಲಾಲ್ ಹಾಗು ಸದಸ್ಯ ದೇವಿಪ್ರಸಾದ್ ರೈ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *