ಬೆಳ್ತಂಗಡಿ: ಇಲ್ಲಿನ ಅಂಡಿಂಜೆ ಗ್ರಾಮ ಪಂಚಾಯತ್‌ನ ಸದಸ್ಯೆಯೊಬ್ಬರು ತಾವೇ ಸ್ವತಃ ಹಾರೆ, ಗುದ್ದಲಿ ಹಿಡಿದು ಪೈಪ್ ಲೈನ್ ರಿಪೇರಿ ಮಾಡಿದ ಕೆಲಸಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.
ಈ ಮೂಲಕ ಜನ ಮೆಚ್ಚುಗೆಗೆ ಪಾತ್ರರಾದವರು ಸಾವ್ಯ ವಾರ್ಡ್ನ ಸದಸ್ಯೆಯಾಗಿರುವ ಸರೋಜಾ ಎಂಬವರು.
ಅವರು ಕಳೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಇದೀಗ ಇವರ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸರೋಜಾ ಅವರು ಗ್ರಾಮಸ್ಥರೊಂದಿಗೆ ಅತ್ಯುತ್ತಮ ಒಡನಾಟ ಬೆಳೆಸಿಕೊಂಡಿದ್ದು, ಜನರ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸುತ್ತಾರೆ. ಜೂನ್ 26 ರಂದು ವಾರ್ಡ್’ನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು.
ಈ ವಿಚಾರವನ್ನು ಗ್ರಾಮಸ್ಥರು ಸರೋಜಾ ಅವರ ಗಮನಕ್ಕೆ ತಂದಾಗ ಪೈಪ್‌ಲೈನ್ ರಿಪೇರಿ ಮಾಡುವವರು ಯಾರಾದರೂ ಸಿಗಬಹುದೇ ಎಂದು ವಿಚಾರಿಸಿದ್ದರು. ಆದರೆ, ಯಾರು ಸಿಕ್ಕಲ್ಲ. ಹಾಗಾಗಿ ಸಮಸ್ಯೆಯನ್ನು ಬಗೆಹರಿಸುವುದು ತನ್ನ ಜವಾಬ್ದಾರಿ ಎಂದು ತಿಳಿದ ಸರೋಜಾ ಅವರು ತಾವೇ ಗುದ್ದಲಿ, ಹಾರೆ ಹಿಡಿದು ದುರಸ್ತಿ ಕಾರ್ಯ ಮಾಡಿದ್ದಾರೆ. ಮಳೆ ಸುರಿಯುತ್ತಿದ್ದರೂ ರೈನ್ ಕೋಟ್ ಧರಿಸಿ ಹಾರೆ, ಗುದ್ದಲಿಯಿಂದ ಮಣ್ಣು ಅಗೆದು ಪೈಪ್‌ಲೈನ್ ದುರಸ್ತಿ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಜೂನ್ ೨೬ರಂದು ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಈ ವಿಚಾರವನ್ನು ಗ್ರಾಮಸ್ಥರು ಸರೋಜಾ ಅವರ ಗಮನಕ್ಕೆ ತಂದಾಗ ಪೈಪ್‌ಲೈನ್ ರಿಪೇರಿ ಮಾಡುವವರು ಯಾರಾದರೂ ಸಿಗಬಹುದೇ ಎಂದು ವಿಚಾರಿಸಿದ್ದರು. ಆದರೆ, ಯಾರು ಸಿಕ್ಕಲ್ಲ. ಹಾಗಾಗಿ ಸಮಸ್ಯೆಯನ್ನು ಬಗೆಹರಿಸುವುದು ತನ್ನ ಜವಾಬ್ದಾರಿ ಎಂದು ತಿಳಿದ ಸರೋಜಾ ಅವರು ತಾವೇ ಗುದ್ದಲಿ, ಹಾರೆ ಹಿಡಿದು ದುರಸ್ತಿ ಕಾರ್ಯ ಮಾಡಿದ್ದಾರೆ.