Ad Widget .

ಇಂದು ‘ಕಬ್ಜಾ’ ಕಡೆಯಿಂದ ‘ಕಿಚ್ಚಾ-ಉಪ್ಪಿ’ ಅಭಿಮಾನಿಗಳಿಗೆ ರಸದೌತಣ

ರಿಲೀಸ್​​ಗೂ ಮೊದಲೇ ಉಪೇಂದ್ರ ಹಾಗೂ ಸುದೀಪ್ ನಟನೆಯ ‘ಕಬ್ಜ’ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರದ ವಿನೂತನ ಹಾಲಿವುಡ್ ಶೈಲಿಯ ಪೋಸ್ಟರ್ ಇಂದು ಮುಂಜಾನೆ 6 ಗಂಟೆಗೆ ಬಿಡುಗಡೆಯಾಗಿದೆ. ಈ ಪೋಸ್ಟರ್​ನಿಂದ ಅಭಿಮಾನಿಗಳಿಗೆ ರಸದೌತಣ ಸಿಕ್ಕಿದೆ.

Ad Widget . Ad Widget .

ಉಪೇಂದ್ರ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ವಿಶೇಷಪಾತ್ರದಲ್ಲಿ ಕಿಚ್ಚ ಸುದೀಪ್ ನಟಿಸುತ್ತಿದ್ದಾರೆ. ‘ಮುಕುಂದ ಮುರಾರಿ’ ಚಿತ್ರದ ನಂತರ ಈ ಜೋಡಿ ‘ಕಬ್ಜ’ ಚಿತ್ರದಲ್ಲಿ ಒಂದಾಗಿದೆ. ಖ್ಯಾತ ನಿರ್ದೇಶಕ ಆರ್. ಚಂದ್ರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

Ad Widget . Ad Widget .

ಎಂ.ಟಿ.ಬಿ ನಾಗರಾಜ್ ಅರ್ಪಿಸುವ, ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆರ್ ಚಂದ್ರು ಅವರೆ ನಿರ್ಮಿಸುತ್ತಿರುವ ಕಬ್ಜ ಚಿತ್ರಕ್ಕೆ ‘ಕೆಜಿಎಫ್’ ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶನವಿದೆ. ಕಾರ್ಯಕಾರಿ ನಿರ್ಮಾಪಕರಾಗಿ ಮುನೀಂದ್ರ ಹಾಗೂ ಲೈನ್ ಪ್ರೊಡ್ಯೂಸರ್ ಆಗಿ ರಾಜಶೇಖರ್ ಕಾರ್ಯನಿರ್ವಹಿಸುತ್ತಿದ್ದಾರೆ. ಎ.ಜೆ.ಶೆಟ್ಟಿ ಛಾಯಾಗ್ರಹಣ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ ಹಾಗೂ ರವಿವರ್ಮ, ವಿಕ್ರಂಮೋರ್, ವಿಜಯ್ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಉಪೇಂದ್ರ, ಕಿಚ್ಚ ಸುದೀಪ್, ಕಾಮರಾಜನ್(ಐ ಸಿನಿಮಾ ಖ್ಯಾತಿ), ಜಗಪತಿ ಬಾಬು, ರಾಹುಲ್ ಜಗತಪ್, ಅನೂಪ್ ರೇವಣ್ಣ, ಜಾನ್ ಕೊಕೆನ್, ರಾಹುಲ್ ದೇವ್, ನವೀನ್, ಕೋಟ ಶ್ರೀನಿವಾಸ್, ಜಯಪ್ರಕಾಶ್, ಕಾಟ್ ರಾಜು, ಸುಬ್ಬರಾಜು ಮುಂತಾದವರಿದ್ದಾರೆ.

Leave a Comment

Your email address will not be published. Required fields are marked *