Ad Widget .

ರಾಜ್ಯಕ್ಕೆ ಶೀಘ್ರದಲ್ಲೇ ಹೊಸ‌ ಮುಖ್ಯಮಂತ್ರಿ ಸಾಧ್ಯತೆ, ನಾಯಕತ್ವ ಬದಲಾವಣೆ ಕಸರತ್ತು ನಡೆಸುತ್ತಿರುವ ಬಿಜೆಪಿ ಹೈಕಮಾಂಡ್!?

ಬೆಂಗಳೂರು : ನಾಯಕತ್ವದ ಬದಲಾಣೆಗಾಗಿ ಶುರುವಾಗಿದ್ದ ರಾಜ್ಯ ಬಿಜೆಪಿಯೊಗಿನ ಭಿನ್ನಮತದ ಬೆಂಕಿ ಈಗಲೂ ಬೂದಿ ಮುಚ್ಚಿದ ಕೆಂಡದಂತಿದೆ. ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಭೇಟಿಯ ಬೆನ್ನಲೇ ಎಲ್ಲವೂ ತಣ್ಣಗಾದಂತೆ ಕಂಡರೂ, ಮತ್ತೆ ರಾಜ್ಯ ಬಿಜೆಪಿಯಲ್ಲಿ ಈಗ ಕುತೂಹಲಕಾರಿ ಬೆಳವಣಿಗೆಗಳು ನಡೆದಿವೆ.

Ad Widget . Ad Widget .

ಬಿಜೆಪಿ ಹೈಕಮಾಂಡ್‌ ರಾಜ್ಯ ಬಿಜೆಪಿ ನಾಯಕತ್ವದ ಬದಲಾವಣೆಗೆ ತೆರೆಮರೆಯಲ್ಲೇ ಕಸರತ್ತು ನಡೆಸುತ್ತಿರುವುದು ಸಚಿವ ಹಾಗೂ ರಾಜ್ಯ ಬಿಜೆಪಿ ಭಿನ್ನರ ಬಣದ ಮುಖಂಡ ಸಿ.ಪಿ.ಯೋಗೇಶ್ವರ್‌ ಅವರ ಹೇಳಿಕೆಗಳ ಮೂಲಕ ತೋರಿಸಿದೆ.ಮೂಲಗಳ ಪ್ರಕಾರ ಅತೀ ಶೀಘ್ರದಲ್ಲೇ ರಾಜ್ಯ ಬಿಜೆಪಿ ನಾಯಕತ್ವಕ್ಕೆ ಹೊಸ ಮುಖ ಬರುವುದು ಗ್ಯಾರಂಟಿ ಎನ್ನಲಾಗಿದ್ದು. ಆ ರಹಸ್ಯ ನಾಯಕ ಯಾರು ಎನ್ನುವುದಷ್ಟೇ ಈಗ ಕುತೂಹಲ ಹುಟ್ಟಿಸಿದೆ.
ಬಿಜೆಪಿ ಮೂಲಗಳೇ ಹೇಳುವ ಪ್ರಕಾರ ರಾಜ್ಯ ಬಿಜೆಪಿ ನಾಯಕತ್ವದ ಬದಲಾವಣೆ ಪ್ರಕ್ರಿಯೆ ಇಷ್ಟರಲ್ಲಿಯೇ ಮುಗಿಯಲಿತ್ತು. ಆದರೆ ಕೋವಿಡ್‌ ಹೆಚ್ಚಳವಾದ ಕಾರಣಕ್ಕೆ ಅದು ತಡವಾಯಿತು.

Ad Widget . Ad Widget .

ಅದರಲ್ಲೋ ಕೊರೋನಾ ಹೆಚ್ಚಳವಾದ ಈ ಸಂದರ್ಭದಲ್ಲಿ ನಾಯಕತ್ವ ಬದಲಾದರೆ ಕೆಟ್ಟ ಸಂದೇಶ ರವಾನೆ ಆಗಲಿದೆ ಎಂಬ ಭಯವೂ ಅದಕ್ಕೆ ಅಡ್ಡಿ ಆಯಿತಂತೆ. ಈಗ ಮತ್ತೆ ಅದಕ್ಕೆ ಸಮಯ ಕಾಯುವ ಪ್ರಮೇಯವೇ ಬೇಡ, ಮತ್ತೆ ಕೋವಿಡ್‌ ಮೂರನೇ ಅಲೆಯ ಭೀತಿ ಇರುವುದರಿಂದ ಅದು ಬರುವಷ್ಟರಲ್ಲಿಯೇ ನಾಯಕತ್ವ ಬದಲಾಯಿಸುವುದು ಸೂಕ್ತ ಎನ್ನುವ ಆಲೋಚನೆ ಹೈಕಮಾಂಡ್‌ ಮಟ್ಟದಲ್ಲಿಯೇ ಇದೆ ಎನ್ನಲಾಗಿದೆ. ಈ ಮಧ್ಯೆಯೇ ಸಿಎಂ ಪುತ್ರರಾದ ಸಂಸದ ರಾಘವೇಂದ್ರ ಹಾಗೂ ವಿಜಯೇಂದ್ರ ಕೂಡ ಎರಡ್ಮೂರು ದಿನಗಳ ಹಿಂದಷ್ಟೇ ರಹಸ್ಯವಾಗಿ ದೆಹಲಿಗೆ ಹೋಗಿ ಬಂದಿದ್ದಾರೆ. ಹೈಕಮಾಂಡ್‌ ಸೂಚನೆಯ ಮೇರೆಗೆ ಅವರು ದೆಹಲಿಗೆ ಹೋಗಿ ಬಂದಿರುವ ಬಗ್ಗೆ ಮಾಹಿತಿಗಳಿವೆ.

ಆ ಸಂದರ್ಭದಲ್ಲಿ ನಾಯಕತ್ವದ ಬದಲಾವಣೆ ಕುರಿತು ಹೈಕಮಾಂಡ್‌ ಅವರಿಗೆ ಸ್ಪಷ್ಟ ಸಂದೇಶ ರವಾನಿಸಿದೆಯಂತೆ. ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಕೇಂದ್ರ ಸಚಿವ ಸಂಪುಟಕ್ಕೆ ತೆಗೆದುಕೊಳ್ಳುವಂತೆ ಭರವಸೆ ನೀಡುವ ಮೂಲಕ ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್.‌ ಯಡಿಯೂರಪ್ಪ ಗೌರವದಿಂದ ನಿರ್ಗಮಿಸುವ ಸಂದೇಶವನ್ನು ಅವರ ಪುತ್ರರ ಮೂಲಕ ಹೈಕಮಾಂಡ್‌ ರವಾನಿಸಿದ್ದಾಗಿ ಹೇಳಲಾಗಿದೆ. ಈ ಬೆಳವಣಿಗೆಗಳೆಲ್ಲವೂ ನಾಯಕತ್ವದ ಬದಲಾವಣೆಯ ಸೂಚನೆಗಳೇ ಆಗಿವೆ ಎನ್ನಲಾಗಿದೆ.

Leave a Comment

Your email address will not be published. Required fields are marked *