ಸಾಮಾನ್ಯವಾಗಿ ಏನಾದರೂ ಮಾತನಾಡೋವಾಗ ಪೆಲತ್ತರಿ(ಹಲಸಿನ ಬೀಜ) ಅಂತ ತಾತ್ಸಾರ ಮಾಡ್ತೇವೆ. ಹುರುಳಿಲ್ಲದ ಮಾತಿಗೆ ಈ ರೀತಿ ಹೇಳುವುದುಂಟು. ಹೀಗೆ ಜನರ ಬಾಯಲ್ಲಿ ತಾತ್ಸಾರಗೊಂಡ, ಬೆಲೆಯಿಲ್ಲದ ಹಲಸಿನ ಬೀಜದ ಈಗಿನ ಮಾರ್ಕೆಟ್ ರೇಟ್ ಕೇಳಿದ್ರೆ ನೀವ್ ಬೆಚ್ಚಿ ಬೀಳ್ತೀರ.
ಹೌದು, ಲಾಕ್ ಡೌನ್ ನಿಂದಾಗಿ ಎಲ್ಲಾ ವಸ್ತುಗಳು ಆನ್ ಲೈನ್ ನಲ್ಲೇ ಬಿಕರಿಯಾಗುತ್ತಿವೆ. ಈ ಮಾರುಕಟ್ಟೆಗೆ ಈಗ ಎಂಟ್ರಿ ಕೊಟ್ಟಿದೆ ಹಲಸಿನ ಬೀಜ. ಮಲೆನಾಡಲ್ಲಿ ಬಿದ್ದು ಹಾಳಾಗಿ ಹೋಗುವ ಹಲಸಿನ ಬೀಜದ 800 ಗ್ರಾಂ ಪ್ಯಾಕೆಟ್ ಗೆ 800 ರೂ ಇದ್ದು, 550 ರಿಯಾಯಿತಿ ದರಕ್ಕೆ ಮಾರಾಟವಾಗ್ತಿದೆ. ಆದ್ರಿಂದ ಯಾರಾನ್ನೂ ಪೆಲತ್ತರಿ ಎಂದು ತಾತ್ಸಾರ ಮಾಡಿದ್ರಿ ಜೋಕೆ. ಯಾಕಂದ್ರೆ ಅದಕ್ಕೂ ಒಳ್ಳೆಯ ರೇಟ್ ಇದೆ.
ಪೆಲತ್ತರಿ ಅಂತ ತಾತ್ಸಾರ ಮಾಡ್ಬೇಡಿ, ಅದಕ್ಕೂ ಭಾರೀ ರೇಟ್ ಮರಾಯ್ರೆ…!
