Ad Widget .

ಸೋಂಕಿತರಿಗೆ ಕೇರ್ ಸೆಂಟರ್’ನಲ್ಲಿ ಚಿಕಿತ್ಸೆ ಉತ್ತಮ: ಸಚಿವ ಎಸ್ ಅಂಗಾರ

ಸುಬ್ರಹ್ಮಣ್ಯ: ಕೋವಿಡ್ ಸೋಂಕಿತರು ಕೇರ್ ಸೆಂಟರ್ ನಲ್ಲಿ ಇದ್ದುಕೊಂಡೆ ಚಿಕಿತ್ಸೆ ಪಡೆಯುವುದು ಉತ್ತಮ ಎಂದು ಸಚಿವ ಅಂಗಾರ ಹೇಳಿದ್ದಾರೆ. ಅವರು ನಿನ್ನೆ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

Ad Widget . Ad Widget .

ಕೋವಿಡ್ ಪಾಸಿಟಿವ್ ವರದಿ ಬಂದವರು ಮನೆಯಲ್ಲಿ ಇರುವುದಕ್ಕಿಂತ ಆರೈಕೆ ಕೇಂದ್ರಗಳಲ್ಲಿ ಉಳಿಯುವುದು ಸೂಕ್ತ. ಮನೆಯಲ್ಲಿದ್ದರೆ ನೆರೆಹೊರೆಯವರಿಗೆ ಸೋಂಕು ಹರಡುವ ಸಂಭವ ಹೆಚ್ಚು. ಅದಕ್ಕಾಗಿ ಸಾರ್ವಜನಿಕರು ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಚಿಕಿತ್ಸೆ ಪಡೆಯಬೇಕು. ಆರೈಕೆ ಕೇಂದ್ರದಲ್ಲಿ ಆಹಾರ ಮತ್ತು ಔಷಧ ವಿತರಣೆ ವ್ಯವಸ್ಥಿತವಾಗಿ ನಡೆಯುತ್ತದೆ. ಸೋಂಕಿತರು ಭಯವಿಲ್ಲದೆ ಕೋವಿಡ್ ಮುಕ್ತರಾಗಬಹುದು ಎಂದು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್ ಅಂಗಾರ ಹೇಳಿದರು.

Ad Widget . Ad Widget .

ಸಚಿವರು ಸಭೆಯಲ್ಲಿ ಕೋವಿಡ್ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್ ವಿತರಿಸಿದರು. ಕುಮಾರಧಾರ ಸಭಾಂಗಣ ದಲ್ಲಿ ನಡೆದ ಸಭೆಯಲ್ಲಿ ಕಡಬ ತಹಶೀಲ್ದಾರ್, ಸುಳ್ಯ ತಹಶೀಲ್ದಾರ್, ತಾಲೂಕು ಕೋವಿಡ್ ನೋಡೆಲ್ ಅಧಿಕಾರಿ, ಆರೋಗ್ಯ ಅಧಿಕಾರಿಗಳು ಮತ್ತು ಸುಬ್ರಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷ ಕಾರ್ಯದರ್ಶಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *