ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಕೈಯಲ್ಲಿ ಮೊಬೈಲ್ ಇರುತ್ತೆ ಅದಕ್ಕೆ ಇಂಟರ್ನೆಟ್ ಸಂಪರ್ಕವಂತೂ ಇದ್ದೇ ಇರುತ್ತೆ. ಹಾಗಾಗಿ ಅಶ್ಲೀಲತೆಯನ್ನು ನೋಡುವುದು ಸಾಮಾನ್ಯ ವಿಷಯವಾಗಿದೆ. ಆದರೆ, ನಮ್ಮ ಸುಸಂಸ್ಕೃತ ದೇಶದಲ್ಲಿ ಇದೆಲ್ಲವನ್ನು ಯಾರೂ ಒಪ್ಪಲ್ಲ. ಕೆಟ್ಟದು ಅಂತಾನೇ ಪರಿಗಣಿಸಲಾಗುತ್ತೆ. ಆದ್ರೂ ಬಹಳಷ್ಟು ಜನ ಅಶ್ಲೀಲ ವಿಡಿಯೋಗಳನ್ನ ನೋಡ್ತಾನೆ ಇರ್ತಾರೆ. ಇದಕ್ಕಾಗಿ ಹಲವು ಗಂಟೆಗಳನ್ನು ಹಾಳು ಮಾಡ್ತಾರೆ. ಸಧ್ಯ ಇಂತಹ ವಿಡಿಯೋಗಳನ್ನ ನೋಡೋದ್ರಿಂದ ಆಗುವ ಅನುಕೂಲಗಳು ಮತ್ತು ಅನಾನುಕೂಲಗಳೇನು ನೋಡೋಣ.
ಅಶ್ಲೀಲತೆಯನ್ನು ವೀಕ್ಷಿಸಲು ಅನುಮತಿಸಲಾಗಿದೆ ಅನ್ನೋದರ ಕುರಿತು ಯಾವುದೇ ವೈಜ್ಞಾನಿಕ ಮಾಹಿತಿಯಿಲ್ಲ.
ಕೆಲವು ಸಮಯದ ಹಿಂದೆ ಈ ಕುರಿತು ಒಂದು ಅಧ್ಯಯನವನ್ನ ಮಾಡಲಾಗಿದ್ದು, ಅದು ಮಿತಿಯನ್ನ ನಿರ್ಧರಿಸಲು ನಿಮಗೆ ಸಹಾಯ ಮಾಡುತ್ತೆ.
ಅಶ್ಲೀಲತೆ ನೋಡುವುದರಿಂದ ಒತ್ತಡ ಕಡಿಮೆಯಾಗುತ್ತೆ..!
ಸೋಶಿಯಾಲಜಿ ಜರ್ನಲ್ನಲ್ಲಿ ಪ್ರಕಟವಾದ ಈ ಅಧ್ಯಯನವು ಉಚಿತ ಸಮಯದಲ್ಲಿ ಮನರಂಜನೆಗಾಗಿ ಅಶ್ಲೀಲತೆಯನ್ನು ನೋಡುವುದು ತಪ್ಪಲ್ಲ ಎಂದು ಹೇಳಿದೆ. ಇದನ್ನ ಮಾಡುವುದರಿಂದ, ಆರೋಗ್ಯಕರ ಹಾರ್ಮೋನುಗಳು ಬಿಡುಗಡೆಯಾಗುತ್ವೆ ಮತ್ತು ನಿಮ್ಮ ಒತ್ತಡವೂ ಕಡಿಮೆಯಾಗುತ್ತೆ ಎಂದು ತಜ್ಞರು ಹೇಳಿದ್ದಾರೆ.
ಅಶ್ಲೀಲತೆಯನ್ನು ಇಷ್ಟು ದಿನ ನೋಡ್ಬೇಡಿ..!
ತಜ್ಞರ ಪ್ರಕಾರ, ನೀವು ವಾರದಲ್ಲಿ 4 ಗಂಟೆಗಳ ಕಾಲ ಅಶ್ಲೀಲತೆಯನ್ನ ವೀಕ್ಷಿಸ್ಬೋದು. ಹಾಗಂತ, ದಿನನಿತ್ಯ ಈ ವಿಡಿಯೋಗಳನ್ನ ನೋಡೋದಲ್ಲ. ಒಂದು ವಾರದಲ್ಲಿ 4 ಗಂಟೆಗಳ ಕಾಲ ಇದನ್ನ ನೋಡ್ಬೋದು. ಆದ್ರೆ, ನೆನಪಿರಲಿ ಹೆಚ್ಚುವರಿ ಅಶ್ಲೀಲತೆ ಹೆಚ್ಚು ಕೆಟ್ಟದು.
ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು..!
ಕೆಲವು ಅಧ್ಯಯನಗಳ ಪ್ರಕಾರ, ಹೆಚ್ಚು ಅಶ್ಲೀಲತೆಯನ್ನು ನೋಡುವುದು ನಿಮ್ಮ ಮಾನಸಿಕ ಆರೋಗ್ಯ ಮತ್ತು ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ನೀವು ಗಡುವನ್ನು ನಿಗದಿಪಡಿಸುವುದು ಉತ್ತಮ.
ಒಂದು ಚೌಕಟ್ಟಿನೊಳಗೆ ಅಶ್ಲೀಲತೆಯನ್ನ ನೋಡುವುದು ತಪ್ಪಲ್ಲ. ಆದ್ರೆ, ಅದು ನಿಮ್ಮನ್ನ ದೈಹಿಕವಾಗಿ ಅಥವಾ ಮಾನಸಿಕವಾಗಿ ತೊಂದರೆಗೊಳಿಸಬಾರದು ಅಷ್ಟೇ.