Ad Widget .

ಮೋದಿ‌ ನೇತೃತ್ವದ ಸರ್ವಪಕ್ಷ ಸಭೆಯಲ್ಲಿ ಸರ್ವನಿಯಮ ಉಲ್ಲಂಘನೆ | ಇವ್ರು ಹೇಳೋದು ಶಾಸ್ತ್ರ, ಇಕ್ಕೋದು ಗಾಳ

ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಚುನಾವಣೆ ನಡೆಸಲು ಪ್ರಧಾನಿ ಮೋದಿ ನೇತೃತ್ವದಲ್ಲಿ ಶುಕ್ರವಾರ ಸರ್ವಪಕ್ಷಗಳ ಸಭೆ ನಡೆಸಿದ್ದು, ಈ ಸಭೆಯಲ್ಲಿ ಭಾಗವಹಿಸಿದ್ದ ಅಷ್ಟೂ ಹಿರಿಯ ರಾಜಕಾರಣಿಗಳು ಕೊರೊನಾ ನಿಯಮ ಉಲ್ಲಂಘಿಸಿ‌ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Ad Widget . Ad Widget .

ಇವರ ಅವಿವೇಕತನದಿಂದಾಗಿ ಜನಸಾಮಾನ್ಯರು ಇವರಿಗೆ ಕೊರೊನ ಬರಲ್ವೇ? ಅಂತ ಜಾಲತಾಣಗಳಲ್ಲಿ ಪ್ರಶ್ನಿಸುತ್ತಿದ್ದಾರೆ.
ಸರ್ವ ಪಕ್ಷಗಳ ಸಭೆಯಲ್ಲಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಜಮ್ಮು ಕಾಶ್ಮೀರದ ಮಾಜಿ ಸಿಎಂಗಳಾದ ಓಮರ್ ಅಬ್ದುಲ್ಲಾ, ಮೆಹಬೂಬ ಮುಪ್ತಿ, ಪಾರೂಕ್ ಅಬ್ದುಲ್ಲಾ, ಕಾಂಗ್ರೇಸ್ ನ ಗುಲಾಂ ನಬಿ ಆಜಾದ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

Ad Widget . Ad Widget .

ಸಭೆ ಬಳಿಕ ಎಲ್ಲಾ ಮುಖಂಡರು ಪೋಟೋ ಸೆಶನ್ ಗೆ ನಿಂತಿದ್ದು ಈ ವೇಳೆ ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ಮರೆತಿದ್ದಾರೆ. ಈ ಫೋಟೋ ನೋಡಿದ ಮಂದಿ ಕೊರೊನ ನಿಯಮಗಳು ಜನಸಾಮಾನ್ಯರಿಗೆ ಮಾತ್ರವೇ ಅಂತ ಪ್ರಶ್ನೆ ಎತ್ತಿದ್ದು ಈ ನಾಯಕರ ನಿಲುವಿಗೆ ಆಕ್ಷೇಪ ವ್ಯಕ್ತವಾಗಿದೆ.

Leave a Comment

Your email address will not be published. Required fields are marked *