Ad Widget .

ರೀಲ್ ನಲ್ಲಿ ಮಾತ್ರ ಅಲ್ಲ‌ ರಿಯಲ್ ಲೈಫಲ್ಲೂ ಪವರ್ ಸ್ಟಾರ್ ‘ಯುವರತ್ನ’

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ‘ಯುವರತ್ನ’ ಸಿನಿಮಾದಲ್ಲಿ ಡ್ರಗ್ ಮಟ್ಟ ಹಾಕಬೇಕು ಎನ್ನುವ ಸಂದೇಶವಿದೆ. ಶಿಕ್ಷಕ ವೃತ್ತಿ ಮಾಡುತ್ತಲೇ ಪುನೀತ್ ಡ್ರಗ್ಸ್ ಜಾಲವನ್ನು ನಾಶ ಮಾಡುವ ಕೆಲಸ ಮಾಡುತ್ತಾರೆ. ಈಗ ಅವರು ನಿಜ ಜೀವನದಲ್ಲೂ ಈ ಕಾರ್ಯ ಮಾಡುತ್ತಿದ್ದಾರೆ.

Ad Widget . Ad Widget .

Ad Widget . Ad Widget .

ಇತ್ತೀಚೆಗೆ ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಜಾಲ ಪತ್ತೆ ಆಗಿತ್ತು. ಸಾಕಷ್ಟು ಸೆಲೆಬ್ರಿಟಿಗಳ ಹೆಸರು ಇದರಲ್ಲಿ ಕೇಳಿ ಬಂದಿತ್ತು. ಈ ಬೆಳವಣಿಗೆ ನಂತರದಲ್ಲಿ ಬೆಂಗಳೂರು ಪೊಲೀಸರು ಮಾದಕ ದ್ರವ್ಯ ವಸ್ತುಗಳನ್ನು ಮಟ್ಟಹಾಕಬೇಕು ಎಂದು ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ. ಈಗ ಇದಕ್ಕೆ ಪುನೀತ್ ಕೂಡ ಬೆಂಗಳೂರು ನಗರ ಪೊಲೀಸರ ಜತೆ ಕೈ ಜೋಡಿಸಿದ್ದಾರೆ.

ಬೆಂಗಳೂರು ಸಿಟಿ ಪೊಲೀಸ್ ಈ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರೆ. ಡ್ರಗ್ಸ್ ಇದು ನಮ್ಮ ಸಮಾಜಕ್ಕೆ ದೊಡ್ಡ ಕಂಟಕ. ಇದಕ್ಕೆ ಯಾರೂ ಬೇಕಿದ್ದರೂ ಬಲಿ ಆಗಬಹುದು. ಇದಕ್ಕೆ ಯಾರೂ ಬಲಿ ಆಗದಂತೆ ನೋಡಿಕೊಳ್ಳಲು ಪೊಲೀಸರ ಜತೆ ಕೈ ಜೋಡಿಸಿ ಇದರ ವಿರುದ್ಧ ನಾವೆಲ್ಲರೂ ಹೋರಾಡಬೇಕು. ಡ್ರಗ್ಸ್ ತೆಗೆದುಕೊಳ್ಳಬೇಡಿ. ಜೀವ ಬಹುಮುಖ್ಯ ಎಂದಿದ್ದಾರೆ ಪುನೀತ್.

Leave a Comment

Your email address will not be published. Required fields are marked *