Ad Widget .

ಗಂಡ-ಹೆಂಡತಿ ಜಗಳವಾಡಿ ಸ್ವಂತ ಮಗುವನ್ನೇ ಕೊಂದರು…! ಹಾಸನದಲ್ಲಿ ನಡೆಯಿತು ಅಮಾನವೀಯ ಘಟನೆ

ಹಾಸನ: ಗಂಡ ಹೆಂಡತಿ ಜಗಳವಾಡಿ ಕೊನೆಗೆ ತಮ್ಮ ಸ್ವಂತ ಮಗುವನ್ನೇ ಹತ್ಯೆ ಮಾಡಿದ ಹೃದಯ ವಿದ್ರಾವಕ ಘಟನೆ ಹಾಸನದಲ್ಲಿ ನಡೆದಿದೆ. ಮಗುವನ್ನು ಕೊಂದ ತಂದೆ ತಾಯಿ ಬಳಿಕ ಶವವನ್ನು ಕಾಫಿ ತೋಟದಲ್ಲಿ ಹೂತು ಹಾಕಿದ್ದಾರೆ.

Ad Widget . Ad Widget .

ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕಾಡ್ಲೂರುಕೊಪ್ಪಲು ಗ್ರಾಮದಲ್ಲಿ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಸ್ಸಾಂನಿಂದ ಕೆಲಸಕ್ಕೆಂದು ಹಾಸನಕ್ಕೆ ಬಂದಿದ್ದ ಕುಟುಂಬವೊಂದು ಇಲ್ಲೇ ಸಂಸಾರ ಸಮೇತವಾಗಿ ವಾಸವಾಗಿತ್ತು.

Ad Widget . Ad Widget .

ಅವರ ಒಂದೂವರೆ ವರ್ಷದ ಮಗು ಸಫೀಕ್ ಉಲ್ಲಾ ಇಸ್ಲಾಂನನ್ನು ಕೊಂದಿರುವ ಪೋಷಕರು ಬಳಿಕ ಕಾಫಿ ತೋಟದಲ್ಲಿ ಹೂತು ಹಾಕಿದ್ದಾರೆ. ತಂದೆ ರಫೀಕ್ ಉಲ್ಲಾ ಇಸ್ಲಾಂ ಹಾಗೂ ಆತನ ಎರಡನೇ ಪತ್ನಿ ಸೇರಿ ಮಗುವನ್ನು ಕೊಂದಿದ್ದಾರೆ ಎನ್ನಲಾಗಿದೆ.

ಕೆಲವು ದಿನಗಳ ಹಿಂದೆ ಗಂಡ- ಹೆಂಡತಿಯ ನಡುವೆ ಜಗಳ ನಡೆದಿತ್ತು. ಈ ವೇಳೆ ಅಳುತ್ತಿದ್ದ ಮಗುವನ್ನು ಕೋಪದಿಂದ ಹೊಡೆದು ಸಾಯಿಸಿ, ನಂತರ ಶವವನ್ನು ಹೂತು ಹಾಕಿದ್ದಾರೆ ಎಂದು ಸ್ಥಳೀಯರು ದೂರು ನೀಡಿದ್ದರು.

ದೂರು ದಾಖಲಿಸಿಕೊಂಡಿರುವ ಪೊಲೀಸರು ಮಗುವಿನ ಶವವನ್ನು ಹೊರತೆಗೆದು ವೈದ್ಯಕೀಯ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ತಹಸೀಲ್ದಾರ್ ಶಿರೀನ್ ತಾಜ್, ಆಲೂರು ಪೊಲೀಸರು ಭೇಟಿ ನೀಡಿ ಆರೋಪಿಗಳನ್ನು ಬಂಧಿಸಿದ್ದಾರೆ.

Leave a Comment

Your email address will not be published. Required fields are marked *