Ad Widget .

ಒಲಿಂಪಿಕ್ ನಲ್ಲಿ ಇತಿಹಾಸ ಸೃಷ್ಟಿಸಿದ ‘ಸಾಜನ್’, ಬಟರ್ ಫ್ಲೈನಲ್ಲಿ ಅರ್ಹತೆ ಪಡೆದ ಮೊದಲ ಭಾರತೀಯ

ಹೊಸದಿಲ್ಲಿ: ಇಟಲಿಯ ರೋಮ್‌ನ ಸೆಟ್ಟೆ ಕೊಲ್ಲಿ ಟ್ರೋಫಿಯಲ್ಲಿ ಶನಿವಾರ ನಡೆದ ಪುರುಷರ 200 ಮೀಟರ್ ಬಟರ್‌ಫ್ಲೈ ಸ್ಪರ್ಧೆಯಲ್ಲಿ ಸಾಜನ್ ಪ್ರಕಾಶ್ 1:56:38 ಸೆಕೆಂಡುಗಳಲ್ಲಿ ಗುರಿ ತಲುಪಿ ಒಲಿಂಪಿಕ್ಸ್ ಅರ್ಹತಾ ಸಮಯವನ್ನು ಮೀರಿದ ಮೊದಲ ಭಾರತೀಯ ಈಜುಗಾರ ಎನಿಸಿಕೊಳ್ಳುವುದರೊಂದಿಗೆ ಇತಿಹಾಸ ನಿರ್ಮಿಸಿದ್ದಾರೆ.

Ad Widget . Ad Widget .

2016 ರ ರಿಯೊ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ 27 ವರ್ಷದ ಪ್ರಕಾಶ್ ಟೋಕಿಯೋ ಕ್ರೀಡಾಕೂಟದಲ್ಲಿ ನಿಗದಿಪಡಿಸಿರುವ ‘ಎ’ ಮಾನದಂಡವನ್ನು (1: 56.48 ಸೆಕೆಂಡು) ಮೀರಿ ನಿಂತರು.

Ad Widget . Ad Widget .

ಕೇರಳದ ಈಜುಗಾರ 200 ಮೀಟರ್ ಬಟರ್ ಫ್ಲೈ ಸ್ಪರ್ಧೆಯಲ್ಲಿ ತಮ್ಮ ಪ್ರದರ್ಶನವನ್ನು ನಿರಂತರವಾಗಿ ಸುಧಾರಿಸುತ್ತಿದ್ದಾರೆ. ಕಳೆದ ವಾರ, ಬೆಲ್ ಗ್ರೇಡ್ ಟ್ರೋಫಿ ಈಜು ಸ್ಪರ್ಧೆಯಲ್ಲಿ ಅವರು 1: 56.96 ಸೆಕೆಂಡುಗಳಲ್ಲಿ ಗುರಿ ತಲುಪಿದ್ದರು. ಆದರೆ ಎ ಅರ್ಹತಾ ಮಾನದಂಡ ಮೀರುವುದಕ್ಕೆ ವಿಫಲರಾಗಿದ್ದರು.

Leave a Comment

Your email address will not be published. Required fields are marked *