Ad Widget .

ಕೋಲಾರ ಬೀದರ್’ನಲ್ಲಿ ಎನ್ ಸಿಬಿ ದಾಳಿ | ನಗದು ಸಹಿತ ಬರೋಬ್ಬರಿ 98 ಕೆಜಿ ಡ್ರಗ್ಸ್ ಜಪ್ತಿ

ಬೆಂಗಳೂರು: ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ಘಟಕ (ಎನ್‌ಸಿಬಿ) ಅಧಿಕಾರಿಗಳು, ಕೋಲಾರ ಹಾಗೂ ಬೀದರ್‌ನಲ್ಲಿ ಪ್ರತ್ಯೇಕ ದಾಳಿ ನಡೆಸಿ ಬರೋಬ್ಬರಿ 91 ಕೆಜಿ ಮಾದಕ ದ್ರವ್ಯ ಮತ್ತು 62 ಲಕ್ಷ ರೂ ನಗದು ವಶಪಡಿಸಿಕೊಂಡಿದ್ದಾರೆ.

Ad Widget . Ad Widget .

Ad Widget . Ad Widget .

ಖಚಿತ ಮಾಹಿತಿ ಆಧಾರದಲ್ಲಿ ಎನ್ ಸಿ ಬಿ ಆಂಧ್ರ ಮೂಲದ ಎನ್ ವಿ ರೆಡ್ಡಿ ಎಂಬಾತನಿಗೆ ಸೇರಿದ ಕೋಲಾರ ಕೈಗಾರಿಕಾ ಪ್ರದೇಶದಲ್ಲಿದ್ದ ಅಕ್ರಮ ಕಾರ್ಖಾನೆ, ಬೀದರ್ನಲ್ಲಿದ್ದ ಕಾರ್ಖಾನೆ ಹಾಗೂ ಆತನ ಮನೆ ಮೇಲೆ ಎನ್‌ಸಿಬಿ ದಾಳಿ‌ ನಡೆಸಿದೆ.

ಸ್ಥಳದಲ್ಲಿ ನಿಷೇದಿತ ಆಲ್ಪಾಜೋಲಮ್ ಪೌಡರ್ ತಯಾರಿಸಿ ಕೋಲಾರ, ಬೀದರ್, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಮಾರಾಟ ಮಾಡಲಾಗುತ್ತಿತ್ತು.

ಎನ್ ವಿ ರೆಡ್ಡಿ ಆತನ ಸಹಚರಾದ ಎಸ್. ಮೆನನ್, ವೈ.ವಿ. ರೆಡ್ಡಿ, ಅಮೃತ್ ಹಾಗೂ ಭಾಸ್ಕರ್ ಜೊತೆ ಸೇರಿಕೊಂಡು ಅಕ್ರಮ ಕಾರ್ಖಾನೆ ತೆರೆದು ಡ್ರಗ್ಸ್ ವ್ಯವಹಾರ ನಡೆಸುತ್ತಿದ್ದ.
ಬೆಂಗಳೂರು ವಲಯದ ಎನ್.ಸಿ.ಬಿ ವಲಯಾಧಿಕಾರಿ ಅಮಿತ್ ಗಾವಟೆ ನೇತೃತ್ವದಲ್ಲಿ ದಾಳಿ ನಡೆಸಿ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ.

Leave a Comment

Your email address will not be published. Required fields are marked *