ಬಂಟ್ವಾಳ : ತಾಲೂಕಿನ ವೀರಕಂಬ ರಕ್ಷಿತಾರಣ್ಯ ದಿಂದ ಲಕ್ಷಾಂತರ ರೂ ಮೌಲ್ಯದ ಗಂಧದ ಮರಗಳನ್ನು ಕಡಿದು, ಮಾರಾಟ ಮಾಡಲು ಯತ್ನಿಸಿದ ವೇಳೆ ಬಂಟ್ವಾಳ ವಲಯ ಆರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳ ಬಂಧಿಸಿದ್ದಾರೆ.
ಪಾತೂರು ನಿವಾಸಿ ಇಬ್ರಾಹಿಂ ಹಾಗೂ ಇರಾ ಗ್ರಾಮದ ಮೊಯಿದ್ದೀನ್ ಬಂಧಿತ ಆರೋಪಿಗಳು. ಕಾರ್ಯಚರಣೆ ವೇಳೆ ಇಬ್ಬರು ಆರೋಪಿಗಳು ಪರಾರಿಯಾಗಿದ್ದು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿಸಲಾಗಿದೆ.

ಸಿದ್ದೀಕ್ ಹಾಗೂ ಸಿದ್ದೀಕ್ ಯಾನೆ ಕೊರಂಗು ಸಿದ್ದೀಕ್ ತಲೆಮರೆಸಿಕೊಂಡ ಆರೋಪಿಗಳು. ಆರೋಪಿಗಳು ಅಂದಾಜು ಮೂರು ಲಕ್ಷ ಮೌಲ್ಯದ ಗಂಧದ ಮರದ ಸೊತ್ತುಗಳನ್ನು ಕಳವು ಮಾಡಿದ್ದರು.

ಗಂಧದ ಮರಗಳನ್ನು ಕಡಿದು ತುಂಡು ಮಾಡಿ ಮಾರಟ ಮಾಡಲು ತಯಾರಿ ನಡೆಸಿದ್ದರು . ಈ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆಯ ಅಧಿಕಾರಿಗಳು ಮಿಂಚಿನ ಕಾರ್ಯಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ .
ಸ್ಥಳಕ್ಕೆ ಬೇಟಿ ನೀಡಿದ ಸಂಧರ್ಭದಲ್ಲಿ ಆರೋಪಿಗಳು ಕಾಡು ಪ್ರಾಣಿಯಾದ ಉಡ ವೊಂದನ್ನು ಹಿಡಿದು ಪದಾರ್ಥ ಮಾಡಲು ತಯಾರಿ ನಡೆಸುತ್ತಿದ್ದು ಅ ಪ್ರಾಣಿಯನ್ನು ಕೂಡ ರಕ್ಷಣೆ ಮಾಡಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ. ಆರೋಪಿಗಳ ಬಂಧಿಸಿದ ಅರಣ್ಯಾಧಿಕಾರಿಗಳು ವಿಚಾರಣೆ ಕಾರ್ಯ ಮುಂದುವರಿಸಿದ್ದಾರೆ.