Ad Widget .

ಕಾಸರಗೋಡು: ಮಧೂರು ಮಲ್ಲ ಸೇರಿದಂತೆ ಜಿಲ್ಲೆಯ ಹಲವು ಊರುಗಳ ಹೆಸರು ಮಲಯಾಳಂಗೆ | ಪ್ರಕ್ರಿಯೆ ಕೈಬಿಡುವಂತೆ ಒತ್ತಾಯಿಸಿ ಸರ್ಕಾರಕ್ಕೆ ಮನವಿ

ಕಾಸರಗೋಡು: ಕಾಸರಗೋಡು ಜಿಲ್ಲೆಯ ಹಲವು ಕನ್ನಡ ಊರುಗಳ ಹೆಸರುಗಳನ್ನು ಕೇರಳ ಸರಕಾರ ಮಲಯಾಳಮ್ ಗೆ ಬದಲಾಯಿಸಿದೆ. ಇದೀಗ ಪಿಣರಾಯಿ ಸರಕಾರದ ವಿರುದ್ಧ ಆಕ್ರೋಶಿತರಾಗಿರುವ ಜನ ಸರಕಾರಕ್ಕೆ ಪತ್ರ ಬರೆದಿದ್ದಾರೆ.

Ad Widget . Ad Widget .

ಭೌಗೋಳಿಕವಾಗಿ ಕೇರಳ ರಾಜ್ಯದಲ್ಲಿದ್ದರೂ ಬಹುವಾಗಿ ಕನ್ನಡ ಮತ್ತು ತುಳು ಭಾಷಿಗರಿರುವ ಕಾಸರಗೋಡು ಜಿಲ್ಲೆಯಲ್ಲಿರುವ ಹಲವು ಊರುಗಳ ಹೆಸರು ಈಗ ಮಳಯಾಳಂಗೆ ಬದಲಾಗಿದೆ. ಪ್ರಸಿದ್ಧ ಪುಣ್ಯ ಕ್ಷೇತ್ರಗಳಾದ ಮಧೂರು ಮತ್ತು ಮಲ್ಲ ಊರುಗಳ ಹೆಸರನ್ನೂ ಕೂಡ ಬದಲಾಯಿಸಲಾಗಿದೆ. ಜಿಲ್ಲೆಯ ಕನ್ನಡ ಮಾತನಾಡುವ ಬಹುಸಂಖ್ಯಾತ ಕನ್ನಡಿಗರ ಅಭಿಪ್ರಾಯ ಕೇಳದೆ ಸರಕಾರ ಈ ನಿರ್ಧಾರ ಕೈಗೊಂಡಿರುವುದಕ್ಕೆ ಜನ ಆಕ್ರೋಶತರಾಗಿದ್ದಾರೆ. ಶತಮಾನದ ಹಿಂದಿನಿಂದ ಬಂದಿರುವ ಜಿಲ್ಲೆಯ ಗ್ರಾಮಗಳ ಕನ್ನಡ ಭಾಷೆಯ ಹೆಸರನ್ನು ಬದಲಾಯಿಸಿತ್ತಿರುವ ಪ್ರಕ್ರಿಯೆ ಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ಕೇರಳ ಮತ್ತು ಕರ್ನಾಟಕ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳಿಗೆ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಮನವಿ ಸಲ್ಲಿಸಿದೆ.

Ad Widget . Ad Widget .

ಪ್ರಸಿದ್ಧ ದೇವಾಲಯಗಳಾದ ಮಧೂರು ಮತ್ತು ಮಲ್ಲ ದ ಹೆಸರನ್ನು ಮಧುರಮ್ ಮತ್ತು ಮಲ್ಲಮ್ ಎಂದು ಬದಲಾಯಿಸಲಾಗಿದೆ. ಕಾರಡ್ಕ ವನ್ನು ಕಡಗಮ್, ಪಿಲಿಕುಂಜೆಯನ್ನು ಪಿಳಿಕುನ್ನು, ಮಂಜೇಶ್ವರವನ್ನು ಮಂಜೇಶ್ವರಂ, ಕುಂಬಳೆಯನ್ನು ಕುಂಬ್ಲಾ, ನೆಲ್ಲಿಕುಂಜವನ್ನು ನೆಲ್ಲಿಕ್ಕುನ್ನಿ, ಬೆದಡ್ಕವನ್ನು ಬೇಡಗಂ, ಆನೆಬಾಗಿಲು ಹೆಸರನ್ನು ಆನೆವಾಗಿಲ್, ಹೊಸದುರ್ಗವನ್ನು ಪುದಿಯಕೋಟ ಮತ್ತು ಸಸಿಹಿತ್ಲು ನ್ನು ಶೈವಲಮ್ ಎಂದು ಬದಲಾಯಿಸಲಾಗಿದೆ.

Leave a Comment

Your email address will not be published. Required fields are marked *