Ad Widget .

ಮಾಸ್ಕ್ ಇಲ್ಲದೇ‌ ಬ್ಯಾಂಕ್ ಪ್ರವೇಶಿಸಿದ ಗ್ರಾಹಕ, ಸೆಕ್ಯೂರಿಟಿ ಗಾರ್ಡ್ ನಿಂದ ಫೈರಿಂಗ್

ಉತ್ತರ ಪ್ರದೇಶ: ಮಾಸ್ಕ್ ಧರಿಸಿದೆ ಬ್ಯಾಂಕ್ ಒಳಪ್ರವೇಶಿಸಲು ಯತ್ನಿಸಿದ ಗ್ರಾಹಕನ ಮೇಲೆ ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ ಗುಂಡು ಹಾರಿಸಿದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಗ್ರಾಹಕ ರಾಜೇಶ್ ಕುಮಾರ್ ಬರೇಲಿಯಲ್ಲಿರುವ ಬ್ಯಾಂಕ್ ಆಫ್ ಬರೋಡ ಶಾಖೆಗೆ ಆಗಮಿಸಿದ್ದಾನೆ. ಬ್ಯಾಂಕ್‌ನಲ್ಲಿನ ಕೆಲಸಕ್ಕೆ 11.30ಕ್ಕೆ ಆಗಮಿಸಿದ ರಾಜೇಶ್ ಕುಮಾರ್ ಮಾಸ್ಕ್ ಧರಿಸಿರಲಿಲ್ಲ. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಮಾಸ್ಕ್ ಧರಿಸಿದೆ ಒಳ ಪ್ರವೇಶಿಸಲು ಸಾಧ್ಯವಿಲ್ಲ ಎಂದಿದ್ದಾನೆ.
ಸೆಕ್ಯೂರಿಟಿ ಗಾರ್ಡ್ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಹಕ ನೇರವಾಗಿ ಬ್ಯಾಂಕ್ ಒಳ ಪ್ರವೇಶಿಸಲು ಯತ್ನಿಸಿದ್ದಾನೆ. ಇದರಿಂದ ಕೆರಳಿದ ಸೆಕ್ಯೂರಿಟಿ ಗಾರ್ಡ್, ಬಂದೂಕಿನಿಂದ ನೇರವಾಗಿ ಗುಂಡು ಹಾರಿದ್ದಾನೆ. ತೀವ್ರವಾಗಿ ಗಾಯಗೊಂಡ ಗ್ರಾಹಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇತ್ತ ಸೆಕ್ಯೂರಿಟಿ ಗಾರ್ಡ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಬ್ಯಾಂಕ್ ಅಳವಡಿಸಿರುವ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಸೆಕ್ಯೂರಿಟಿ ಗಾರ್ಡ್ ಹಾಗೂ ಗ್ರಾಹಕನ ನಡುವಿನ ಮಾತುಕತೆ, ಅಲ್ಲಿನ ಪರಿಸ್ಥಿತಿ ಸಿಸಿಟಿವಿ ದೃಶ್ಯದಿಂದ ಬಯಲಾಗಲಿದೆ. ಇದರಿಂದ ತಪ್ಪಿತಸ್ಥರು ಯಾರು ಅನ್ನೋದು ಹೊರಬೀಳಲಿದೆ ಎಂದು ಬರೋಡ ಜಂಕ್ಷನ್ ಶಾಖೆಯ ಬ್ಯಾಂಕ್ ಮ್ಯಾನೇಜರ್ ಗೀತಾ ಭುಸಾಲ್ ಹೇಳಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *