ದೆಹಲಿ: ಕಾಲ ಕಳೆದಂತೆ ತಮಗೆ ಬೇಕಾದಂತ ವರನೇ ಗಂಡನಾಗಿ ಬೇಕು, ಮದುವೆಯಾಗುವ ಯುವತಿ ಹೀಗೆ ಇರಬೇಕು ಎಂಬ ಕಂಡಿಷನ್ಸ್ ಹೆಚ್ಚಾಗಿದೆ. ಮದುವೆಗೆ ವರನನ್ನು, ವಧುವನ್ನು ಹುಡುಕುವುದು ಸುಲಭವೂ ಹೌದು ಕಷ್ಟವೂ ಹೌದು. ಮ್ಯಾಟ್ರಿಮೋನಿ ಸೈಟ್‌ಗಳಲ್ಲಿ ನೂರಾರು ಆಯ್ಕೆಗಳಿವೆ, ಆದರೆ ಅದರಲ್ಲಿ ತಮಗೆ ಒಪ್ಪುವವರನ್ನು ಆಯ್ಕೆ ಮಾಡುವುದು ಒಂದು ಸವಾಲಾಗಿದೆ. ಸುದ್ದಿ ಪತ್ರಿಕೆಗಳಲ್ಲಿ ವರ ಬೇಕಾಗಿದ್ದಾರೆ, ವಧು ಬೇಕಾಗಿದ್ದಾರೆ ಎಂಬ ಜಾಹೀರಾತುಗಳಿಗೇನು ಕಮ್ಮಿ ಇಲ್ಲ. ತಮಗೆ ಬೇಕಾದಂತೆ ನೋಡಲು ಹೇಗಿರಬೇಕು, ವಿದ್ಯಾರ್ಹತೆ ಎಷ್ಟಿರಬೇಕು , ಜಾತಿ, ಮತ ಎಲ್ಲವನ್ನೂ ತಿಳಿಸಿ ಜಾಹೀರಾತು ನೀಡಿರುತ್ತಾರೆ. ಕೆಲವೊಮ್ಮ ಈ ಜಾಹೀರಾತುಗಳಲ್ಲಿನ ಬೇಡಿಕೆಗಳು ನಕ್ಕು ಉಕ್ಕಿಸುತ್ತೆ. ಅಂಥಹದ್ದೇ, ವರ ಬೇಕಾಗಿದ್ದಾರೆ ಜಾಹೀರಾತು ಈಗ ಸಖತ್ ವೈರಲ್ ಆಗಿದೆ.
ಇಂಗ್ಲಿಷ್ ಸುದ್ದಿಪತ್ರಿಕೆಯಲ್ಲಿ ವರ ಬೇಕಾಗಿದ್ದಾರೆ ಎಂದು 30 ವರ್ಷ ದಾಟಿದ ಮಹಿಳೆ ಜಾಹೀರಾತು ನೀಡಿದ್ದಾರೆ. ಅಲ್ಲಿ 25 ರಿಂದ 28 ವರ್ಷದೊಳಗಿನ ವರ ಬೇಕು. ತಾನು ಗಿಡ್ಡ ತಲೆಗೂದಲಿನ, ಸಾಮಾಜಿಕ ಕಾರ್ಯಕರ್ತೆ ಆಗಿದ್ದು ಸೂಕ್ತ ವರ ಬೇಕಾಗಿದ್ದಾರೆ. ಒಳ್ಳೆಯ ಮನೆ ಇರಬೇಕು. ತಂದೆ-ತಾಯಿಗೆ ಅವನು ಒಬ್ಬನೇ ಮಗನಾಗಿರಬೇಕು. ಕನಿಷ್ಠ 20 ಎಕರೆ ಜಾಗ, ತೋಟದ ಮನೆ ಇರಬೇಕು. ಉದ್ಯಮಿಯಾಗಿದ್ದು, ಅಡುಗೆ ಮಾಡಲು ಬಲ್ಲವನಾಗಿರಬೇಕು ಎಂದು ತಿಳಿಸಲಾಗಿದೆ. ಇಷ್ಟೇ ಆಗಿದ್ದರೂ ಪರವಾಗಿಲ್ಲ ಎನ್ನಬಹುದಿತ್ತು. ಆದರೆ ಬೇಡಿಕೆಯ ಪಟ್ಟಿ ಮುಂದುವರೆದು ಊಟ ಮಾಡಿದ ಬಳಿಕ ತೇಗಬಾರದು, ಹೂಸು ಬಿಡಬಾರದು ಅಂತ ಕಂಡಿಷ ನ್ಸ್ ಹಾಕಿದ್ದಾರೆ. ಈ ಎಲ್ಲಾ ಕಂಡಿಷನ್ಸ್ಗೆ ಓಕೆ ಆದರೆ ಇಮೇಲ್ ವಿಳಾಸಕ್ಕೆ ವಿವರ ಕಳುಹಿಸಿ ಎಂದೂ ತಿಳಿಸಿದ್ದಾರೆ. ಮದುವೆಯಾಗ ಬಯಸಿರುವ ಮಹಿಳೆ ಈ ಜಾಹೀರಾತಿಗಾಗಿ 13,000 ರೂಪಾಯಿ ಖರ್ಚು ಮಾಡಿದ್ದಾರೆ.
ಜಾಹೀರಾತಿನಲ್ಲಿ ಮಹಿಳೆ ಇಮೇಲ್ ಐಡಿ ಇದ್ದು ಸಾಕಷ್ಟು ಜನ ಮೇಲ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೊಡ್ಡ ಸ್ವಾರ್ಥಿ ನೀನು ಎಂದು ಜಡಾಸಿದ್ದಾರಂತೆ. ಜೊತೆಗೆ ನೀನು ಉಂಡ ಬಳಿಕ ತೇಗುವುದೇ ಇಲ್ವಾ, ಯಾವತ್ತೂ ಹೂಸು ಬಿಟ್ಟೇ ಇಲ್ವಾ ಎಂದು ಕಾಲೆಳೆದಿದ್ದಾರಂತೆ. ಪತ್ರಿಕೆ ಜಾಹೀರಾತು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.