ಮಂಗಳೂರು: ಜಿಲ್ಲೆಯಲ್ಲಿ ಸೋಂಕು ನಿಯಂತ್ರಿಸುವ ಹಿನ್ನೆಲೆಯ ಶನಿವಾರ ಹಾಗೂ ರವಿವಾರದಂದು ಕಟ್ಟುನಿಟ್ಟಿನ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ. ಅನಗತ್ಯವಾಗಿ ಓಡಾಡಿದಲ್ಲಿ ವಾಹನಗಳನ್ನು ಸೀಝ್ ಮಾಡಲು ಪೊಲೀಸರಿಗೆ ಸಂಪೂರ್ಣ ಅಧಿಕಾರವೆಂದು ಡಿಸಿಪಿ ಹರಿರಾಂ ಶಂಕರ್ ಹೇಳಿದ್ದಾರೆ.
ಇನ್ನೂ ಈ ಸಂದರ್ಭದಲ್ಲಿ ಆರೋಗ್ಯ ಸೇವೆ ಹೊರತು ಪಡಿಸಿ ಬಹುತೇಕ ಎಲ್ಲಾ ಚಟುವಟಿಕೆಗಳು ಸ್ತಭವಾಗಿರಲಿದೆ. ಸಾರ್ವಜನಿಕರ ವಾಹನಗಳು ಸಂಚಾರ ನಡೆಸುವಂತಿಲ್ಲ. ಖಾಸಗಿ ವಾಹನಗಳು ರಸ್ತೆಗಿಳಿದ್ದಲ್ಲಿ ಮುಲಾಜಿಲ್ಲದೆ ಸೀಝ್ ಮಾಡಲು ಕಾನೂನು ಹಾಗೂ ಸುವ್ಯವಸ್ಥೆಯ ಡಿಸಿಪಿ ಹರಿರಾಂ ಶಂಕರ್ ಆದೇಶ ನೀಡಿದ್ದಾರೆ. ತುರ್ತು ಸಂದರ್ಭ ಆರೋಗ್ಯ ಸೇವೆ ಹೊರತುಪಡಿಸಿ ಇತರೆ ಯಾವುದೇ ವಾಹನಗಳು ರಸ್ತೆಗಿಳಿದ್ದಲ್ಲಿ ಅವುಗಳನ್ನು ಸೀಝ್ ಮಾಡಲು ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಡಿಸಿಪಿ ಹರಿರಾಂ ಶಂಕರ್ ಹೇಳಿದ್ದೇನು? ಇಲ್ಲಿದೆ ವಿಡಿಯೋ: