Ad Widget .

ಮಹಿಳೆಯರ ಮುಂದೆ ಬೆತ್ತಲಾಗಿ ಅಸಭ್ಯ ವರ್ತನೆ | ಅಪ್ಪನ ಜೊತೆ ಮಕ್ಕಳೂ ಅರೆಸ್ಟ್

ಚಾಮರಾಜನಗರ: ಕುಡಿದ ಮತ್ತಿನಲ್ಲಿ ನರೇಗಾ ಕೆಲಸ ಮಾಡುತ್ತಿದ್ದ ಮಹಿಳೆಯರ ಎದುರು ಬೆತ್ತಲಾದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮದ ಇಬ್ಬರ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಆತನ ಇಬ್ಬರು ಮಕ್ಕಳನ್ನೂ ಬಂಧಿಸಲಾಗಿದೆ.

Ad Widget . Ad Widget .

ಜಿಲ್ಲೆಯ ಪುನಜನೂರು ಗ್ರಾಮದ ತಾಂಡವಮೂರ್ತಿ ಎಂಬಾತ ಗ್ರಾಮದಲ್ಲಿ ನರೇಗಾ ಕೆಲಸ ಮಾಡುತ್ತಿದ್ದ ಮಹಿಳೆಯ ಜೊತೆ ವಾಗ್ವಾದಕ್ಕಿಳಿದಿದ್ದ. ಈ ವೇಳೆ ಕುಡಿದಮತ್ತಿನಲ್ಲಿದ್ದ ಆತನ ಪಂಚೆ ಜಾರಿಬಿದ್ದಿದೆ. ಆ ಬಳಿಕ ಆತ ಒಳಗಿದ್ದ ಒಳ ಉಡುಪನ್ನು ಜಾರಿಸಿ ಮಹಿಳೆಯರ ಎದುರು ಅಸಭ್ಯವಾಗಿ ವರ್ತಿಸಿದ್ದಾನೆ.

Ad Widget . Ad Widget .

ಸ್ಥಳದಲ್ಲಿದ್ದ ಕೆಲವರು ಘಟನೆಯ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣ ಗಳಲ್ಲಿ ಹರಿಯ ಬಿಟ್ಟಿದ್ದಾರೆ.

ಘಟನೆ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿಯನ್ನು ಬಂಧಿಸಿ ಕರೆದೊಯ್ದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಆತನ ಮಕ್ಕಳು ತಂದೆಯ ಬಂಧನಕ್ಕೆ ಗ್ರಾಮದ ಮಣಿ ಮತ್ತು ಶಾಂತರಾಜು ಕಾರಣ ಎಂದು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ತಾಂಡವಮೂರ್ತಿಯ ಮಕ್ಕಳಾದ ಮಹೇಂದ್ರ ಮತ್ತು ಮಲ್ಲಿಕಾರ್ಜುನ ಎಂಬವರನ್ನು ಚಾಮರಾಜನಗರ ಪೂರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ.

Leave a Comment

Your email address will not be published. Required fields are marked *