Ad Widget .

ಮುಸ್ಲಿಂ ಯುವತಿ, ದಲಿತ ಯುವಕನ ಬರ್ಬರ ಹತ್ಯೆ ಪ್ರಕರಣ | ಕಲ್ಲು ಎತ್ತಿ ಹಾಕಿದ ಆರೋಪಿಗಳು ಅಂದರ್

ವಿಜಯಪುರ: ಮುಸ್ಲಿಂ ಯುವತಿ ಹಾಗೂ ದಲಿತ ಯುವಕನನ್ನು ಬರ್ಬರ ಹತ್ಯೆ ಮಾಡಿ, ಜಿಲ್ಲೆಯ ಸಲಾಡಹಳ್ಳಿ ಗುಡ್ಡಪ್ರದೇಶದಲ್ಲಿ ಇಬ್ಬರ ಶವನ್ನು ಎಸೆಯಲಾಗಿತ್ತು. ಇದೀಗ ಈ ಪ್ರಕರಣ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Ad Widget . Ad Widget .

ಕಲಕೇರಿ ಠಾಣಾ ವ್ಯಾಪ್ತಿಯಲ್ಲಿ ಮೊನ್ನೆ ಮಧ್ಯಾಹ್ನ ಬಸವರಾಜ್ (19), ದಾವಲಭಿ (18) ಎಂಬ ಪ್ರೇಮಿಗಳ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರ ಹತ್ಯೆ ಮಾಡಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಯುವತಿ ತಂದೆ ಬಂದಗಿಸಾಬ್ ತಂಬದ್ (50), ಸಹೋದರ ದಾವಲ್ ಪಟೇಲ್ (29), ಅಳಿಯರಾದ ಅಲ್ಲಾ ಪಟೇಲ್ (29), ರಫಿಕ್ (24) ಬಂಧನವಾಗಿದ್ದು, ಮತ್ತೋರ್ವ ಆರೋಪಿ ಲಾಳೆಸಾಬ್‌ಗಾಗಿ ಹುಡುಕಾಟ ನಡೆದಿದೆ.

Ad Widget . Ad Widget .

ಭೀಕರ ಹತ್ಯೆ ನಡೆದ ಸಲಾದಹಳ್ಳಿ ಗ್ರಾಮದ ಸುತ್ತ ಆರೋಪಿಗಳ ಪತ್ತೆಗೆ ಕಲಕೇರಿ ಪಿಎಸ್‌ಐ ಗಂಗೂಬಾಯಿ ಬಿರದಾರ್ ಬಲೆ ಬೀಸಿದ್ದರು. ಚಡಚಣ ಸಿಪಿಐ ಚಿದಂಬರಂ ಅವರು ಈ ಮೂರು ತಂಡಗಳಿಗೆ ನೇತೃತ್ವವನ್ನ ವಹಿಸಿಕೊಂಡಿದ್ದರು. 24ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಲು ಪೀಲ್ಡಿಗಿಳಿದಿದ್ದ ಖಾಕಿ ಪಡೆ, ಯಶಸ್ಸು ಕಂಡಿದ್ದು, ಇಂದು ನಾಲ್ವರು ಆರೋಪಿಗಳನ್ನು ಕಲಕೇರಿ ಪೊಲೀಸರು ಬಂಧಿಸಿದ್ದಾರೆ.

ಯುವತಿ ತಂದೆ ಹಾಗೂ ಆಕೆ ಸಹೋದರ ಸೇರಿ ನಾಲ್ವರನ್ನು ಬಂಧಸಿದ್ದಾರೆ.

ಆರೋಪಿಗಳ ಪತ್ತೆಗೆ ಜಿಲ್ಲಾ ಪೊಲೀಸ್ ಇಲಾಖೆ ಮೂರು ಪ್ರತ್ಯೇಕ ತಂಡಗಳನ್ನು ರಚಿಸಿತ್ತು. ದೇವರಹಿಪ್ಪರಗಿ, ಆಲಮೇಲ, ಕಲಕೇರಿ ಠಾಣೆಗಳ ಪಿಎಸ್‌ಐ ಒಳಗೊಂಡ ಮೂರು ತಂಡಗಳು ಹಂತಕರಿಗಾಗಿ ಎರಡು ದಿನದಿಂದ ಹುಡುಕಾಟ ನಡೆಸುತ್ತಿದ್ದರು.

ವಿಜಯಪುರದ ಲಾಡ್ಜ್, ಮಾರ್ಕೆಟ್, ದೇಗುಲಗಲ್ಲಿ ಆರೋಪಿಗಳಿಗಾಗಿ ದೇವರಹಿಪ್ಪರಗಿ ಪಿಎಸ್‌ಐ ರವಿ ಯಡವನ್ನವರ್ ಹುಡುಕಾಟ ನಡೆಸಿದರೆ, ಕಲಬುರಗಿ ಜಿಲ್ಲೆಯಲ್ಲಿ ಆಲಮೇಲ ಪಿಎಸ್‌ಐ ಸುರೇಶ ಗಡ್ಡಿ ತಂಡ ಬಲೆ ಬೀಸಿತ್ತು. ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ.

Leave a Comment

Your email address will not be published. Required fields are marked *