Ad Widget .

ನಡುರಸ್ತೆಯಲ್ಲಿ ಹೊಡೆದಾಡಿದ ಐಪಿಎಸ್ ಅಧಿಕಾರಿಗಳು ಸಸ್ಪೆಂಡ್ | ಇಲ್ಲಿದೆ ವೈರಲ್ ವಿಡಿಯೋ

ಹಿಮಾಚಲ ಪ್ರದೇಶ: ರಾಜ್ಯದ ಕುಲ್ಲು ಜಿಲ್ಲಾ ಎಸ್ಪಿ ಮತ್ತು ಸಿಎಂ ಬೆಂಗಾವಲು ವಾಹನದ ಎಎಸ್ಎಸ್ಪಿ ನಡುರಸ್ತೆಯಲ್ಲಿ ಹೊಡೆದಾಡಿ ಕೊಂಡಿದ್ದಾರೆ. ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಇಬ್ಬರೂ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಮುಂದಿನ ಆದೇಶದವರೆಗೆ ಅಮಾನತುಗೊಳಿಸಲಾಗಿದೆ.

Ad Widget . Ad Widget .

ನಿನ್ನೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಕುಲ್ಲು ಬೇಟಿ ಕೈಗೊಂಡಿದ್ದರು. ಈ ವೇಳೆ ಸಚಿವರನ್ನು ಸ್ವಾಗತಿಸಲು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕುರ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು. ಈ ವೇಳೆ ಕುಲ್ಲು ಪೊಲೀಸ್ ವರಿಷ್ಠಾಧಿಕಾರಿ ಗೌರವ ಸಿಂಗ್ ಸಿಎಂ ಬೆಂಗಾವಲು ವಾಹನದ ಎಸ್ಎಸ್ಪಿ ಬ್ರಿಜೇಶ್ ಸೂದ್ ಅವರ ಕಪಾಳಕ್ಕೆ ಹೊಡೆದಿದ್ದಾರೆ. ಈ ವೇಳೆ ಸಿಎಂ ಬೆಂಗಾವಲು ವಾಹನದ ಸಿಬ್ಬಂದಿಗಳು ಮತ್ತು ಎಸ್ಪಿ ನಡುವೆ ಹೊಡೆದಾಟ ಸಂಭವಿಸಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಇತರೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇವರನ್ನು ಸಮಾಧಾನ ಪಡಿಸಿದ್ದಾರೆ.

Ad Widget . Ad Widget .

ಘಟನೆ ನಡೆದ ಸಂದರ್ಭ ಸಿಎಂ ಕಾರಿನಲ್ಲೇ ಇದ್ದರು ಎನ್ನಲಾಗಿದೆ. ಇನ್ನು ಏಕಾಏಕಿ ಹಿರಿಯ ಅಧಿಕಾರಿಗಳು ಯಾಕಾಗಿ ಹೊಡೆದಾಡಿಕೊಂಡರು ಎನ್ನುವುದು ಯಾರಿಗೂ ಗೊತ್ತಿಲ್ಲ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಹಿಮಾಚಲಪ್ರದೇಶ ಡಿ ಜಿ ಪಿ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಮುಂದಿನ ಆದೇಶದವರೆಗೆ ರಜೆ ಮೇಲೆ ತೆರಳಲು ಸೂಚಿಸಿ ಶೀಘ್ರ ತನಿಖೆಗೆ ಆದೇಶಿಸಿದ್ದಾರೆ.

ವೈರಲ್ ವಿಡಿಯೋ: https://youtu.be/zTewL6-j3Hohttps://youtu.be/zTewL6-j3Ho

Leave a Comment

Your email address will not be published. Required fields are marked *