Ad Widget .

ಪ್ರೇಯಸಿಗೆ ನಿಶ್ಚಿತಾರ್ಥ ಕೇಳಲು ಹೋದ ಪ್ರಿಯಕರನ ಬರ್ಬರ ಹತ್ಯೆ

ತಮಿಳುನಾಡು: ತಾನು ಪ್ರೀತಿಸಿದ ಹುಡುಗಿಗೆ ನಿಶ್ಚಿತಾರ್ಥ ವಾಗಿರುವುದನ್ನು ತಿಳಿದು ಹುಡುಗಿ ಮನೆಗೆ ವಿಚಾರಿಸಲು ತೆರಳಿದ ಯುವಕನನ್ನು, ಯುವತಿಯ ಮನೆಯವರು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ.

Ad Widget . Ad Widget .

ರಾಜ್ಯದ ದಿಂಡಿಗಲ್ ಜಿಲ್ಲೆಯ ಯುವಕ ಭಾರತಿ ರಾಜ್ (21) ಕೊಲೆಯಾದವನು. ಈತ ಹಾಗೂ ಪಕ್ಕದ ಊರಿನ ಯುವತಿ ಪರಮೇಶ್ವರಿ ಎಂಬಾಕೆ ಕಳೆದ ಐದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ವಿಷಯ ತಿಳಿದ ಯುವತಿಯ ಮನೆಯವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೂ ಇವರು ಬೇರೆ ಬೇರೆಯಾಗಿರಲಿಲ್ಲ. ಇದನ್ನು ಕಂಡ ಯುವತಿಯ ಮನೆಯವರು ಆಕೆಗೆ ಬೇರೊಬ್ಬ ಯುವಕನೊಂದಿಗೆ ಮದುವೆ ನಿಶ್ಚಯ ಮಾಡಿದ್ದಾರೆ.

Ad Widget . Ad Widget .

ವಿಷಯ ತಿಳಿದ ಭಾರತಿರಾಜ ತನ್ನಿಬ್ಬರು ಸ್ನೇಹಿತರೊಂದಿಗೆ ಪರಮೇಶ್ವರಿ ಮನೆಗೆ ಮಾತುಕತೆ ನಡೆಸಲು ತೆರಳಿದ್ದಾನೆ. ಮಾತಿಗಿಳಿದ ಭಾರತಿರಾಜ ಮತ್ತು ಪರಮೇಶ್ವರಿಯ ಅಣ್ಣಂದಿರ ನಡುವೆ ಮಾತಿನ ಚಕಮಕಿ ಆರಂಭಗೊಂಡಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪರಮೇಶ್ವರಿಯ ಅಣ್ಣಂದಿರು ಭಾರತೀ ರಾಜ್ ನನ್ನು ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸ್ಥಳೀಯ ಪೊಲೀಸರು ಯುವತಿಯ ಅಣ್ಣಂದಿರಾದ ಬಾಲ ಕುಮಾರ್ ಮತ್ತು ಮಲೈ ಸ್ವಾಮಿಯನ್ನು ಬಂಧಿಸಿದ್ದಾರೆ.

Leave a Comment

Your email address will not be published. Required fields are marked *