Ad Widget .

ಕನಸಿನಲ್ಲಿ ಬಂದು ನಿರಂತರ ಅತ್ಯಾಚಾರ……! | ಪೊಲೀಸರಿಗೆ ದೂರು ನೀಡಿದ ಮಹಿಳೆ

ಔರಂಗಬಾದ್: ಮಂತ್ರವಾದಿಯೊಬ್ಬ ನಿತ್ಯ ಕನಸಿನಲ್ಲಿ ಬಂದು ನನ್ನ ಮೇಲೆ ಅತ್ಯಾಚಾರ ಎಸಗುತ್ತಿದ್ದಾನೆ ಎಂದು ಆರೋಪಿಸಿ ಮಹಿಯೊಬ್ಬಳು ಪೊಲೀಸರಿಗೆ ದೂರು ನೀಡಿದ ಘಟನೆ ಜಿಲ್ಲೆಯ ಕುದ್ವ ಎಂಬಲ್ಲಿ ನಡೆದಿದೆ.

Ad Widget . Ad Widget .

ನನ್ನ ಮಗನಿಗೆ ಹುಷಾರಿಲ್ಲದೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದರೂ ಆತ ಗುಣಮುಖವಾಗಿರಲಿಲ್ಲ. ಹಾಗಾಗಿ ಮಂತ್ರವಾದಿ ಪ್ರಶಾಂತ್ ಚತುರ್ವೇದಿ ಬಳಿ ತೆರಳಿ ಖಾಯಿಲೆ ಗುಣಪಡಿಸುವಂತೆ ಕೇಳಿಕೊಂಡಿದ್ದೆ.

Ad Widget . Ad Widget .

ಆ ವೇಳೆ ಆತ ಮಗುವಿನ ಚೇತರಿಕೆಗಾಗಿ ಮಂತ್ರ ಒಂದನ್ನು ಹೇಳಿಕೊಟ್ಟಿದ್ದ. ಅದನ್ನು ಪಠಿಸುತ್ತಾ ದಿನನಿತ್ಯ ಶಾಸ್ತ್ರ ಒಂದನ್ನು ಮಾಡಲು ತಿಳಿಸಿದ್ದ. ಆತನ ಸೂಚನೆಯನ್ನು ಪಾಲಿಸಿದ ಹದಿನೈದು ದಿನಗಳ ಬಳಿಕ ನನ್ನ ಮಗ ಮೃತಪಟ್ಟಿದ್ದಾನೆ.

ಇದಾದ ಬಳಿಕ ನಾನು ಆತನನ್ನು ಭೇಟಿಯಾಗಿ ಮಗು ಸಾವನ್ನಪ್ಪಿದ ಬಗ್ಗೆ ಪ್ರಶ್ನಿಸಿದ್ದೆ. ಈ ವೇಳೆ ಆತ ನನ್ನ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸಿದ್ದಾನೆ. ಆಗ ನಾನು ಆತನ ಕೈಯಿಂದ ತಪ್ಪಿಸಿಕೊಂಡಿದ್ದೆ. ಆದರೆ ಪೊಲೀಸ್ ದೂರು ನೀಡಿರಲಿಲ್ಲ.

ಆದಾದ ಬಳಿಕ ಇದೀಗ ನನ್ನ ಕನಸಿನಲ್ಲಿ ಬಂದು ನಿರಂತರ ಅತ್ಯಾಚಾರ ಮಾಡುತ್ತಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.

ಮಹಿಳೆ ನೀಡಿದ ದೂರಿನಿಂದ ದಿಗ್ಬ್ರಮೆಗೊಳಗಾದ ಪೊಲೀಸರು ಮಂತ್ರವಾದಿಯನ್ನು ಕರೆದು ವಿಚಾರಿಸಿದ್ದಾರೆ. ವಿಚಾರಣೆ ವೇಳೆ ಆತ, ಈ ಮಹಿಳೆಯನ್ನು ನಾನು ಇಂದಿನವರೆಗೆ ಭೇಟಿಯಾಗಿಲ್ಲ ಎಂದಿದ್ದಾನೆ. ಮತ್ತು ಮಹಿಳೆ ಮಾಡಿದ ಆರೋಪಕ್ಕೆ ಸರಿಯಾದ ಸಾಕ್ಷಿ ಆಧಾರ ಇಲ್ಲದಿರುವುದರಿಂದ ಮತ್ತು ಮಹಿಳೆಯ ದೂರು ಆಸ್ಪಷ್ಟ ವಾಗಿರುವುದರಿಂದ ಆರೋಪಿಯನ್ನು ಬಿಟ್ಟುಕಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ ಮಗನ ಸಾವಿನಿಂದ ಮನನೊಂದು ಈ ರೀತಿ ವರ್ತಿಸಿರಬಹುದು ಎನ್ನಲಾಗಿದೆ.

Leave a Comment

Your email address will not be published. Required fields are marked *