Ad Widget .

ಉಡುಪಿ : ಚೆಕ್ ದುರ್ಬಳಕೆ | 10 ಲಕ್ಷ ರೂ. ವಂಚನೆ

ಉಡುಪಿ: ಪ್ರೋವಿಶನ್ ಸ್ಟೋರ್ಸ್ ಮಾಲೀಕರ ಸ್ಕೂಟರ್‌ನಲ್ಲಿದ್ದ ಬ್ಯಾಗ್ ಕದ್ದು ಅದರಲ್ಲಿದ್ದ ಚೆಕ್‌ಗಳನ್ನು ದುರ್ಬಳಕೆ ಮಾಡಿ ೧೦ ಲಕ್ಷ ರೂ. ವಂಚಿಸಿದ ವ್ಯಕ್ತಿಯ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

Ad Widget . Ad Widget .

ಆರೋಪಿಯನ್ನು ಬ್ರಹ್ಮಾವರ ದೂಪದಕಟ್ಟೆ ನಿವಾಸಿ ಗೋಪಾಲ ಅಮೀನ್ (55) ಎಂದು ಗುರುತಿಸಲಾಗಿದೆ. ಈತ 2019ರ ಜುಲೈ 13ರಂದು ಕರಾವಳಿ ಬೈಪಾಸ್‌ನ ಬಳಿ ಸಂತೆಕಟ್ಟೆಯಲ್ಲಿರುವ ದಶಮಿ ಪ್ರೋವಿಶನ್ ಸ್ಟೋರ್ಸ್ ಮಾಲೀಕರಾದ ಉಡುಪಿಯ ತೋನ್ಸೆ ಗ್ರಾಮದ ನಿವಾಸಿ ಉದಯ ಕುಮಾರ ಎಂಬವರ ಸ್ಕೂಟರ್‌ನ ಬ್ಯಾಗ್‌ನಲ್ಲಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಲ್ಯಾಣಪುರ ಶಾಖೆಯ ಚೆಕ್ ಬುಕ್ ಮತ್ತು ಸ್ಟಾರ್ ಪ್ಲಸ್ ಕಂಪೆನಿಯ ಬಾಂಡ್‌ಗಳಿದ್ದ ಬ್ಯಾಗ್ ಕಳವು ಮಾಡಿದ್ದಾನೆ. ಬಳಿಕ ಅದರಲ್ಲಿದ್ದ ಚೆಕ್‌ಗಳನ್ನು ದುರ್ಬಳಕೆ ಮಾಡಿ, 10 ಲಕ್ಷ. ರೂ ವಂಚಿಸಿದ್ದಾನೆ.

Ad Widget . Ad Widget .

ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪ್ರಕರಣ ದಾಖಲಿಸಲಾಗಿದೆ.

Leave a Comment

Your email address will not be published. Required fields are marked *