Ad Widget .

ಬೆಂಗಳೂರು: 21 ಲಕ್ಷ ಬಿಲ್ ಕಟ್ಟಿದರೂ ಸಿಗಲಿಲ್ಲ ಸೋಂಕಿತೆಯ ಮೃತದೇಹ….! | ಸರಕಾರದ ಎಚ್ಚರ ಖಾಸಗಿ ಆಸ್ಪತ್ರೆಗಳಿಗೆ ಡೋಂಟ್ ಕೇರ್

ಬೆಂಗಳೂರು: ಕೊರೋನಾ ಸೋಂಕಿಗೆ ಒಳಗಾಗಿ ಮೃತಪಟ್ಟ ಮಹಿಳೆಯ ಶವ ನೀಡಲು ಖಾಸಗಿ ಆಸ್ಪತ್ರೆಯೊಂದು ಬರೋಬ್ಬರಿ 26 ಲಕ್ಷ ರೂ. ಬಿಲ್ ಪಾವತಿಸಲು ಹೇಳಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Ad Widget . Ad Widget .

ಕಳೆದ ಕೆಲ ದಿನಗಳ ಹಿಂದೆ ಕೋವಿಡ್ ಸೋಂಕಿಗೆ ಒಳಗಾಗಿ ಮಹಿಳೆಯೊಬ್ಬರು ನಗರದ ಎಚ್ಎಸ್ಆರ್ ಲೇಔಟ್ ನಲ್ಲಿರುವ ಹ್ಯಾಮಿಲ್ಟನ್ ಆಸ್ಪತ್ರೆಗೆ ದಾಖಲಾಗಿದ್ದರು. ಅನಾರೋಗ್ಯ ಉಲ್ಬಣಗೊಂಡು ನಿನ್ನೆ ಸಂಜೆ ಆ ಮಹಿಳೆ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ದಾಖಲಾದಾಗಿನಿಂದ ಈವರೆಗೆ ಸೋಂಕಿತರ ಮನೆಯವರು ಆಸ್ಪತ್ರೆಗೆ ಬರೋಬ್ಬರಿ 21 ಲಕ್ಷ ರೂ. ಬಿಲ್ ಪಾವತಿಸಿದ್ದಾರೆ. ನಿನ್ನೆ ಮಹಿಳೆ ಮೃತಪಟ್ಟ ಬಳಿಕ ಮತ್ತೊಮ್ಮೆ 5 ಲಕ್ಷ ಪಾವತಿಸುವಂತೆ ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಇದಕ್ಕೆ ಕುಟುಂಬಸ್ಥರು ಒಪ್ಪದಿದ್ದಾಗ ಸೋಂಕಿತೆಯ ಮೃತದೇಹ ಕೊಡಲು ಆಸ್ಪತ್ರೆ ನಿರಾಕರಿಸಿದೆ.

Ad Widget . Ad Widget .

ಈ ಬಗ್ಗೆ ಸೋಂಕಿತೆಯ ಕುಟುಂಬಸ್ಥರು ಆಸ್ಪತ್ರೆಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇನ್ನು ರಾಜ್ಯಾದ್ಯಂತ ಕೊರೋನ ಹೆಸರಿನಲ್ಲಿ ಜನಸಾಮಾನ್ಯರ ಸುಲಿಗೆ ಮಾಡುತ್ತಿದ್ದ ಖಾಸಗಿ ಆಸ್ಪತ್ರೆಗಳಿಗೆ ಸರಕಾರ ಎಚ್ಚರಿಕೆ ನೀಡಿತ್ತು. ಆದರೆ ಇದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದ ಕೆಲವು ಖಾಸಗಿ ಆಸ್ಪತ್ರೆಗಳು ಸಾವಿನ ಸಮಯದಲ್ಲೂ ತಮ್ಮ ಹಗಲು ದರೋಡೆ ಮುಂದುವರಿಸುತ್ತಿವೆ.

Leave a Comment

Your email address will not be published. Required fields are marked *