Ad Widget .

ಸೈನಿಕನಾಗುವ ಕನಸು ಕಂಡಿದ್ದ ಯುವಕ ನಿಗೂಢ ಸಾವು | ಸಾವಿನ ಸುತ್ತ ಅನುಮಾನದ ಹುತ್ತ | ಕೊಲೆಯೋ? ಆತ್ಮಹತ್ಯೆಯೋ?

ಸುರತ್ಕಲ್: ಸೈನಿಕನಾಗಲು ಕನಸು‌ ಕಂಡಿದ್ದ ಯುವಕನೋರ್ವನ ಮೃತ ದೇಹ ಕಳೆದ ಸೋಮವಾರ ಸಸಿಹಿತ್ಲು ಕಡಲ ಕಿನಾರೆಯಲ್ಲಿ ಪತ್ತೆಯಾಗಿದ್ದು, ಆತನ‌ ಸಾವಿನ ಹಿಂದೆ ಅನುಮಾನದ ಹೊಗೆಯಾಡುತ್ತಿದೆ. ಹಾಗಾಗಿ ಸೂಕ್ತ ತನಿಖೆಗೆ ಆಗ್ರಹ ವ್ಯಕ್ತವಾಗಿದೆ.

Ad Widget . Ad Widget .

ಸುರತ್ಕಲ್ ನ ಕೃಷ್ಣಾಪುರ ಕ್ರಾಸ್ ನಿವಾಸಿ ಮುಹಮ್ಮದ್ ಶರೀಫ್ ಹಾಜಿ ಪುತ್ರ ಮುಹಮ್ಮದ್ ಫಹಾದ್ (19)ನ ಮೃತದೇಹವು ಸೋಮವಾರ ಸಸಿಹಿತ್ಲು ನದಿ ಕಿನಾರೆಯಲ್ಲಿ ಪತ್ತೆಯಾಗಿತ್ತು.

Ad Widget . Ad Widget .

ಪಿಯುಸಿ ಕಲಿಯುತ್ತಿದ್ದ ಫಹಾದ್ ಸೈನ್ಯಕ್ಕೆ ಸೇರಲು ಸಿದ್ಧತೆ ನಡೆಸುತ್ತಿದ್ದ. ಈ ಬಗ್ಗೆ ಭೋಪಾಲ್‌ಗೆ ತರಬೇತಿಗೂ ತೆರಳಿದ್ದ. ಲಾಕ್‌ಡೌನ್ ಹಿನ್ನಲೆಯಲ್ಲಿ ಊರಿಗೆ ಬಂದಿದ್ದು, ತನ್ನ ಖರ್ಚಿಗಾಗಿ ಫಹಾದ್ ‘ಸ್ವಿಗ್ಗಿ’ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದ. ಜೂ.19ರ ರಾತ್ರಿ ತನ್ನ ಅಣ್ಣನ ಸ್ನೇಹಿತನ ಬೈಕ್‌ನಲ್ಲಿ ಮನೆಯಿಂದ ಹೊರಟಿದ್ದ ಫಹಾದ್ ಮರಳಿ ಮನೆಗ ಬರದೆ ನಿಗೂಢವಾಗಿ ನಾಪತ್ತೆಯಾಗಿದ್ದ.

ಈತನಿಗಾಗಿ ಸಂಬಂಧಿಕರು ಹುಡುಕಾಟ ನಡೆಸಿದಾಗ ಜೂ.21ರ ಬೆಳಿಗ್ಗೆ ಸಸಿಹಿತ್ಲು ಸಮೀಪದ ರುದ್ರಭೂಮಿಯ ಹಿಂಬದಿಯ ಸೇತುವೆಯ ಬಳಿ ಮೊಬೈಲ್ ಸಹಿತ ಬೈಕೊಂದು ಅನಾಥ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಬಳಿಕ ಆತನಿಗಾಗಿ ಹುಡುಕಾಡಿದಾಗ ನದಿ ಕಿನಾರೆಯಲ್ಲಿ ಮೃತದೇಹ ಗುರುತು ಸಿಗಲಾರದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಫಹದ್‌ನ ಮೃತದೇಹ ಎನ್ನುವುದು ದೃಢಪಟ್ಟಿದೆ.

ಘಟನೆ ಬಳಿಕ ಫಹದ್ ಕುಟುಂಬಸ್ಥರು ಸಂಶಯವನ್ನು ವ್ಯಕ್ತಪಡಿಸಿದ್ದು ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ. ಪಹಾದ್ ಶನಿವಾರ ರಾತ್ರಿ ಫುಡ್ ಡೆಲಿವರಿ ಕೆಲಸಕ್ಕೆ ಹೋಗುವುದಾಗಿ ಮನೆಯಿಂದ ಹೇಳಿ ಹೊರಟಿದ್ದ. ಅಲ್ಲದೆ ಶನಿವಾರ ರಾತ್ರಿ ಮುಕ್ಕ ಬಂಕ್‌ನಲ್ಲಿ ಪೆಟ್ರೋಲ್ ಹಾಕಿಸುತ್ತಿದ್ದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಫಹಾದ್‌ನ ಸಾವು ಆಕಸ್ಮಿಕವಲ್ಲ. ಸಾವಿನ ಬಗ್ಗೆ ಅನುಮಾನವಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಫಹಾದ್‌ನ ಸಹೋದರ ತೌಸೀಫ್ ಹೇಳಿದ್ದಾರೆ.

Leave a Comment

Your email address will not be published. Required fields are marked *