Ad Widget .

ಪ್ರೇಮಿಗಳ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರ ಹತ್ಯೆ | ಮುಸ್ಲಿಂ ಯುವತಿ, ದಲಿತ ಯುವಕನ ಶವ ಗುಡ್ದಪ್ರದೇಶದಲ್ಲಿ ಪತ್ತೆ

ವಿಜಯಪುರ: ಜಿಲ್ಲೆಯಲ್ಲಿ ಮುಸ್ಲಿಂ ಯುವತಿ ಮತ್ತು ದಲಿತ ಯುವಕನನ್ನು ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿದ ರೀತಿಯಲ್ಲಿ ಇಬ್ಬರ ಶವ ಜಿಲ್ಲೆಯ ಸಲಾಡಹಳ್ಳಿ ಪ್ರದೇಶದ ಗುಡ್ಡ ಪ್ರದೇಶದಲ್ಲಿ ಕಂಡುಬಂದಿದೆ.

Ad Widget . Ad Widget .

ಯುವಕನನ್ನು ಬಸವರಾಜ್ ಮಡಿವಾಳಪ್ಪ ಎಂದು ಗುರುತಿಸಲಾಗಿದೆ. ಈತ 19 ವರ್ಷದ ಮುಸ್ಲಿಂ ಯುವತಿಯನ್ನು ಪ್ರೀತಿಸುತ್ತಿದ್ದ, ಇದಕ್ಕೆ ಯುವತಿಯ ಮನೆಯವ ವಿರೋದವಿತ್ತು ಎನ್ನಲಾಗಿದೆ.

Ad Widget . Ad Widget .

ಇದೀಗ ಯುವತಿಯನ್ನು ಕುಟುಂಬ ಸದಸ್ಯರು ಹತ್ಯೆ ಮಾಡಿ, ಪರಾರಿಯಾಗಿದ್ದಾರೆ. ಇಬ್ಬರು ಯುವ ಪ್ರೇಮಿಗಳ ತಲೆಗಳಿಗೆ ಯುವತಿಯ ತಂದೆ, ಸಹೋದರರು ಮತ್ತು ಇತರ ಇಬ್ಬರು ಸಂಬoಧಿಕರು ಸೇರಿ ಬಂಡೆಯಿಂದ ಹೊಡೆದು ಸಾಯಿಸಿದ್ದಾರೆ. ಹುಡುಗಿಯ ಕುಟುಂಬ ಸದಸ್ಯರು ಸದ್ಯ ನಾಪತ್ತೆಯಾಗಿದ್ದಾರೆ.

ಯುವತಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದು, ಎರಡೂ ಕುಟುಂಬಗಳು ಅವರ ಸಂಬಂಧವನ್ನು ಆಕ್ಷೇಪಿಸಿದ್ದವು, ಎಂದು ಪೊಲೀಸರು ಹೇಳಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಇದೊಂದು ಮರ್ಯಾದಾ ಹತ್ಯೆ ಪ್ರಕರಣದಂತೆ ಕಾಣುತ್ತಿದೆ. ಏಕೆಂದರೆ ಗ್ರಾಮಸ್ಥರು ಯುವ ಜೋಡಿಯ ಬಗ್ಗೆ ಎರಡೂ ಕುಟುಂಬಗಳಿಗೆ ಇಷ್ಟವಿರಲಿಲ್ಲ ಎಂದು ಹೇಳಿದ್ದಾರೆ.

Leave a Comment

Your email address will not be published. Required fields are marked *