Ad Widget .

ಫಸ್ಟ್ ಟೈಂ ಐಸಿಸಿ ಟ್ರೋಫಿಗೆ ಮುತ್ತಿಕ್ಕಿದ ನ್ಯೂಜಿಲೆಂಡ್

ಸೌಂಥಾಂಪ್ಟನ್: ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಗೆದ್ದುಕೊಳ್ಳುವ ಮೂಲಕ ನ್ಯೂಜಿಲೆಂಡ್ ಇತಿಹಾಸ ನಿರ್ಮಿಸಿದೆ. ಭಾರತದ ವಿರುದ್ಧ 8 ವಿಕೆಟ್‍ಗಳಿಂದ ಗೆದ್ದ ನ್ಯೂಜಿಲೆಂಡ್ ಚೊಚ್ಚಲ ಐಸಿಸಿ ಟ್ರೋಫಿಗೆ ಮುತ್ತಿಕ್ಕಿದೆ.

Ad Widget . Ad Widget .

ಗೆಲ್ಲಲು 139 ರನ್‍ಗಳ ಗುರಿಯನ್ನು ಪಡೆದ ನ್ಯೂಜಿಲೆಂಡ್ 45.5 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 140 ರನ್ ಹೊಡೆಯುವ ಮೂಲಕ ವಿಜಯದ ನಗೆ ಬೀರಿತು. ಇಲ್ಲಿಯವರೆಗೆ ಐಸಿಸಿ ಆಯೋಜಿಸಿದ್ದ ಯಾವುದೇ ಟೂರ್ನಿಯನ್ನು ನ್ಯೂಜಿಲೆಂಡ್ ಗೆದ್ದಿರಲಿಲ್ಲ. ಆದರೆ ಈ ಬಾರಿ ಫೈನಲ್ ಗೆಲ್ಲುವ ಮೂಲಕ ಐಸಿಸಿ ಟ್ರೋಫಿ ಗೆಲ್ಲುವ ಕನಸನ್ನು ಕೊನೆಗೂ ನನಸು ಮಾಡಿದೆ.

Ad Widget . Ad Widget .

ನ್ಯೂಜಿಲೆಂಡ್ ಪರ ನಾಯಕ ಕೇನ್ ವಿಲಿಯಮ್ಸನ್ ಮತ್ತು ರಾಸ್ ಟೇಲರ್ ಮುರಿಯದ ಮೂರನೇ ವಿಕೆಟಿಗೆ 173 ಎಸೆತಗಳಲ್ಲಿ 96 ರನ್ ಜೊತೆಯಾಟವಾಡಿ ಗೆಲುವು ತಂದುಕೊಟ್ಟರು. ಕೇನ್ ವಿಲಿಯಮ್ಸನ್ 52 ರನ್(89 ಎಸೆತ, 8 ಬೌಂಡರಿ), ರಾಸ್ ಟೇಲರ್ 47 ರನ್(100 ಎಸೆತ, 6 ಬೌಂಡರಿ) ಹೊಡೆದರು. ಭಾರತದ ಪರ ಸ್ಪಿನ್ನರ್ ಅಶ್ವಿನ್ 2 ವಿಕೆಟ್ ಪಡೆದರು.

5ನೇ ದಿನ 2 ವಿಕೆಟ್ ನಷ್ಟಕ್ಕೆ 62 ರನ್‍ಗಳಿಸಿದ್ದ ಭಾರತ ಇಂದು 8 ವಿಕೆಟ್ ಗಳ ಸಹಾಯದಿಂದ 92 ರನ್‍ಗಳಿಸಿ ಅಂತಿಮವಾಗಿ 73 ಓವರ್‍ಗಳಲ್ಲಿ 170 ರನ್‍ಗಳಿಗೆ ಆಲೌಟ್ ಆಯ್ತು. ಭಾರತದ ಪರ ರಿಷಭ್ ಪಂತ್ 41 ರನ್(88 ಎಸೆತ, 4 ಬೌಂಡರಿ), ರವೀಂದ್ರ ಜಡೇಜಾ 16 ರನ್, ಅಜಿಂಕ್ಯಾ ರಹಾನೆ 15 ರನ್, ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಶಮಿ 13 ರನ್ ಹೊಡೆದು ಔಟಾದರು.

ಟಿಮ್ ಸೌಥಿ 4 ವಿಕೆಟ್ ಪಡೆದರೆ, ಟ್ರೆಂಡ್ ಬೌಲ್ಟ್ 3, ಕೈಲ್ ಜೇಮಿಸನ್ 2, ನೆಲಿ ವ್ಯಾಗ್ನರ್ 1 ವಿಕೆಟ್ ಪಡೆದರು.

Leave a Comment

Your email address will not be published. Required fields are marked *