Ad Widget .

ಬೆಳ್ತಂಗಡಿ: ಮಗನ ಕೊಂದು ತಂದೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ | ಹಲವು ದಿನಗಳಿಂದ ನಡೆಯುತ್ತಿತ್ತು ಜಗಳ | ಹೆಂಡತಿ, ಮಗನಿಂದ ಅಂತರ ಕಾಯ್ದುಕೊಂಡಿದ್ದ ಬಾಬು ನಾಯ್ಕ

ಬೆಳ್ತಂಗಡಿ: ಮಗನನ್ನು ಕಡಿದು ಕೊಲೆ ಮಾಡಿ ತಂದೆಯೂ ಆತ್ಮಹತ್ಯೆಗೆ ಶರಣಾದ ಘಟನೆ ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಇಂದು ಪುಂಜಾಲಕಟ್ಟೆಯಲ್ಲಿ ನಡೆದಿದೆ. ಈ ಜಗಳ ಹಲವು ದಿನಗಳಿಂದ ನಡೆಯುತ್ತಿದ್ದು, ಈತ ಹೆಂಡತಿ, ಮಗನಿಂದ ಅಂತರ ಕಾಯ್ದುಕೊಂಡಿದ್ದ ಎನ್ನಲಾಗಿದೆ.

Ad Widget . Ad Widget .


ಬಾಬುನಾಯ್ಕ ಹೆಂಡತಿ ಮತ್ತು ಮಗನೊಂದಿಗೆ ಮನೆಯಲ್ಲಿ ವಾಸವಾಗಿದ್ದು, ಕುಡಿತದ ಚಟ ಹೊಂದಿದ್ದ. ಕೆಲ ದಿನಗಳಿಂದ ಮನೆಯಲ್ಲಿ ಮಗನೊಂದಿಗೆ ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆ ಮಾಡುತ್ತಿದ್ದ. ಇಂದು ಮತ್ತೆ ಬಾಬು ನಾಯ್ಕ್ ಪತ್ನಿ ಗೋಡಂಬಿ ಫ್ಯಾಕ್ಟರಿಗೆ ಕೆಲಸಕ್ಕೆ ತೆರಳಿದ್ದು, ಈ ವೇಳೆ ಮತ್ತೆ ಮಗನೊಂದಿಗೆ ಗಲಾಟೆ ಮಾಡಿದ್ದಾನೆ. ಗಲಾಟೆಯಲ್ಲಿ ಮಗನನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಬಳಿಕ ಬಾಬು ನಾಯ್ಕ ಮನೆಯ ಪಕ್ಕಾಸಿಗೆ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Ad Widget . Ad Widget .


ಮಧ್ಯಾಹ್ನ ತಾಯಿ ಸುಗಂಧಿ ಅವರು ಫ್ಯಾಕ್ಟರಿಯಿಂದ ಮಗ ಸ್ವಾತಿಕ್‌ಗೆ ಫೋನ್ ಮಾಡಿದಾಗ ಫೋನ್ ತೆಗೆದಿರಲಿಲ್ಲ. ಈ ಬಗ್ಗೆ ಅನುಮಾನ ಬಂದ ಸುಗಂಧಿಯವರು ತಕ್ಷಣ ಮನೆಗೆ ಬಂದಿದ್ದಾರೆ. ಈ ವೇಳೆ ಮಗನ ದೇಹ ಕಡಿದು ಕೊಲೆ ಮಾಡಿದ ರೀತಿಯಲ್ಲಿ ಮತ್ತು ಪತಿಯ ದೇಹ ನೇಣಿಗೆ ಬಿಗಿದ ರೀತಿಯಲ್ಲಿ ಪತ್ತೆಯಾಗಿತ್ತು.


ಬಾಬು ನಾಯ್ಕ ಕುಡಿತದ ದಾಸನಾಗಿದ್ದು, ಕೆಲ ಸಮಯ ಹೆಂಡತಿ ಮತ್ತು ಮಗ ನಿಂದ ಅಂತರ ಕಾಯ್ದುಕೊಂಡಿದ್ದರು. ಬಳಿಕ ಸಂಬಂಧಿಕರು ಕುಟುಂಬದ ಜೊತೆ ಮಾತುಕತೆ ನಡೆಸಿ ರಾಜಿ ಮಾಡಿದ್ದರು. ಆನಂತರ ಗಂಡ, ಹೆಂಡತಿ ಮತ್ತು ಮಗ ಒಂದೇ ಮನೆಯಲ್ಲಿ ವಾಸವಾಗಿದ್ದರು. ಆದರೆ ಬಾಬು ನಾಯ್ಕ ಕುಡಿದ ಅಮಲಿನಲ್ಲಿ ಹೆಂಡತಿ, ಮಗನೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗುತ್ತಿದೆ.

ತಂದೆ ಮಗ ಬದ್ದ ವೈರಿಗಳಂತೆ ಜಗಳವಾಡುತ್ತಿದ್ದರು. ಇದೀಗ ಮಗನನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


ವಿಷಯ ತಿಳಿದು ಜಿಲ್ಲಾ ಪಂಚಾಯತ್ ಸದಸ್ಯೆ ಸೌಮ್ಯಾ ಎಂ ತುಂಗ್ಗಪ್ಪ ಬಂಗೇರ ಭೇಟಿ ನೀಡಿದ್ದಾರೆ. ಪುಂಜಾಲಕಟ್ಟೆ ಪೊಲೀಸ್ ಅಧಿಕಾರಿ ಸೌಮ್ಯ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಾಗಿಸಿಕೊಂಡಿದ್ದಾರೆ..

Leave a Comment

Your email address will not be published. Required fields are marked *