Ad Widget .

ಮುಸ್ಲಿಂ ವ್ಯಕ್ತಿಗೆ ಥಳಿಸಿದ ವಿಡಿಯೋ ಹಂಚಿಕೊಂಡ ಆರೋಪ | ಪತ್ರಕರ್ತೆ ರಾಣಾ ಅಯ್ಯೂಬ್ ಬಂಧನಕ್ಕೆ ಒಂದು ತಿಂಗಳ ತಡೆ ನೀಡಿದ ಬಾಂಬೆ ಹೈಕೋರ್ಟ್‌

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಮುಂಬೈ: ಗಾಜಿಯಾಬಾದ್ ಲೋನಿಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರನ್ನು ಥಳಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಹಂಚಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತೆ ರಾಣಾ ಅಯ್ಯೂಬ್ ಅವರನ್ನು 4 ವಾರಗಳ ಕಾಲ ಬಂಧಿಸದಂತೆ ಬಾಂಬೆ ಹೈಕೋರ್ಟ್ ಆದೇಶ ನೀಡಿದೆ.

Ad Widget . Ad Widget . Ad Widget .

ಜೂನ್ ಮೊದಲ ವಾರದಲ್ಲಿ ಗಾಝಿಯಾಬಾದ್ ಲೋನಿಯಲ್ಲಿ ಮುಸ್ಲಿಂ ವೃದ್ಧರೊಬ್ಬರನ್ನು ಯುವಕರು ಥಳಿಸಿದ ವಿಡಿಯೋವನ್ನು ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡ ಕಾರಣಕ್ಕೆ ಉತ್ತರ ಪ್ರದೇಶದಲ್ಲಿ ರಾಣಾ ಅಯ್ಯೂಬ್ ಅವರ ವಿರುದ್ಧ FIR ದಾಖಲಾಗಿತ್ತು. FIR ದಾಖಲಾದ ಬೆನ್ನಲ್ಲೇ ರಾಣಾ ಅಯ್ಯೂಬ್ ತಮ್ಮ ಬಂಧನಕ್ಕೆ ತಡೆಕೋರಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು.

ಜಸ್ಟಿಸ್ ಪ್ರಕಾಶ್ ಡಿ. ನಾಯ್ಕ್‌ ಅವರನ್ನೊಳಗೊಂಡ ಬಾಂಬೆ ಹೈಕೋರ್ಟ್ ನ ಏಕ ಸದಸ್ಯ ಪೀಠ ರಾಣಾ ಅಯ್ಯೂಬ್ ಅವರ ಅರ್ಜಿಯನ್ನು ನಿನ್ನೆ ವಿಚಾರಣೆ ನಡೆಸಿತು. ಅಯ್ಯೂಬ್ ಅವರ ಬಂಧನಕ್ಕೆ ತಾತ್ಕಾಲಿಕ ತಡೆ ನೀಡಿದ ಹೈಕೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಸೂಕ್ತ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ಮಾಡಿಕೊಟ್ಟಿದೆ.

ರಾಣಾ ಅಯ್ಯೂಬ್, ದಿ ವೈರ್, ಮೊಹಮ್ಮದ್ ಜುಬೇರ್, ಸಬಾ ನಕ್ವಿ ಸೇರಿದಂತೆ ಹಲವರು ಘಟನೆಯ ಹಿನ್ನಲೆಯನ್ನು ಪರಿಶೀಲಿಸದೇ ವಿಡಿಯೋವನ್ನು ಟ್ವಿಟ್ಟರ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಘಟನೆಗೆ ಧರ್ಮದ ಲೇಪನವನ್ನು ನೀಡಿದ್ದರು. ಇದು ಸಮಾಜದಲ್ಲಿನ ಕೋಮು ಸಾಮರಸ್ಯವನ್ನು ಹದಗೆಡಿಸಿದೆ. ಈ ಕಾರಣದಿಂದ ಇವರ ವಿರುದ್ಧ IPC ಸೆಕ್ಷನ್ 153(ದಂಗೆಗೆ ಪ್ರಚೋದನೆ), 153A (ಸಮುದಾಯಗಳ ನಡುವೆ ಧಾರ್ಮಿಕ ದ್ವೇಷ ಹರಡುವ ಕೃತ್ಯ), ಸೆಕ್ಷನ್ 295A, ಸೆಕ್ಷನ್, ಸೆಕ್ಷನ್ 505 (ಅಪರಾಧಿಕ ಕೃತ್ಯಗಳಿಗೆ ಪ್ರಚೋದನೆ), ಸೆಕ್ಷನ್ 120B (ಅಪರಾಧಿಕ ಒಳಸಂಚು) ಗಂಭೀರವಾದ ಅಪರಾಧಿಕ ಸೆಕ್ಷನ್‌ಗಳ ಅಡಿ FIR ದಾಖಲಿಸಿಕೊಳ್ಳಲಾಗಿತ್ತು ಎಂದು ಉತ್ತರ ಪ್ರದೇಶದ ಪೊಲೀಸರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *