ಹೆಚ್ಚು ಮಕ್ಕಳ ಹೆತ್ತವರಿಗೆ ಟ್ರೋಫಿ ಸಹಿತ ಒಂದು ಲಕ್ಷ ಬಹುಮಾನ…!

ಮಿಜೋರಾಂ: ಕೇಂದ್ರ ಸರ್ಕಾರ ಸಹಿತ ಭಾರತದ ಎಲ್ಲ ರಾಜ್ಯ ಸರ್ಕಾರಗಳು ಜನಸಂಖ್ಯಾ ನಿಯಂತ್ರಣಕ್ಕೆ ಪ್ರೋತ್ಸಾಹ ನೀಡುತ್ತಿರುವುದರ ನಡುವೆ ಮಿಜೋರಾಂನ ಕ್ರೀಡಾ ಸಚಿವರು ಅಚ್ಚರಿಯ

Ad Widget ... ..

ಘೋಷಣೆ ಒಂದನ್ನು ಮಾಡಿದ್ದಾರೆ.

Ad Widget

ತಮ್ಮ ಕ್ಷೇತ್ರದಲ್ಲಿ ಹೆಚ್ಚು ಮಕ್ಕಳನ್ನು ಹೆತ್ತ ಪೋಷಕರಿಗೆ ಪ್ರಮಾಣಪತ್ರ, ಟ್ರೋಫಿ ಜೊತೆಗೆ ಒಂದು ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಮಿಜೋರಾಮ್ ನ ಕ್ರೀಡಾ ಸಚಿವ ರಾಬರ್ಟ್ ರೊಮಾವಿಯಾ ರಾಯ್ಟೆ ಈ ಹೇಳಿಕೆ ನೀಡಿದವರು.

ಈ ಹೇಳಿಕೆಯ ಉದ್ದೇಶ ಕಡಿಮೆ ಜನಸಂಖ್ಯೆ ಹೊಂದಿರುವ ಮಿಜೊ ಸಮುದಾಯಗಳನ್ನು ಪ್ರೋತ್ಸಾಹಿಸುವುದಾಗಿದೆ. ಮಿಜೊ ಸಮುದಾಯದಲ್ಲಿ ಕಡಿಮೆ ಜನಸಂಖ್ಯೆಯ ಬೆಳವಣಿಗೆಯು ಗಂಭೀರ ಚಿಂತನೆಯ ವಿಷಯವಾಗಿದೆ ಎಂದು ಸಚಿವರು ಹೇಳಿದರು.

Leave a Comment

Your email address will not be published. Required fields are marked *