ಮಂಗಳೂರು: ಮಗನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ತಂದೆ

ಮಂಗಳೂರು: ಹಸು ಕಟ್ಟುವ ವಿಚಾರದಲ್ಲಿ ತಂದೆ ಮಗನ ನಡುವೆ ಜಗಳ ನಡೆದು ತಂದೆಯೇ ಮಗನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ನಗರದ ಜಪ್ಪಿನಮೊಗರು ಎಂಬಲ್ಲಿ ನಡೆದಿದೆ.

Ad Widget ... ..

ಬೆಂಕಿ ಹಚ್ಚಿದ ಆರೋಪಿಯನ್ನು ಜಪ್ಪಿನಮೊಗರು ಗ್ರಾಮದ ಕೊಪ್ಪರಿಗೆ ಗುತ್ತು ವಿಶ್ವನಾಥ ಶೆಟ್ಟಿ ಎಂದು ಗುರುತಿಸಲಾಗಿದೆ.
ಹಸು ಕಟ್ಟುವ ವಿಚಾರದಲ್ಲಿ ತಂದೆ ಹಾಗು ಮಗ ಸ್ವಾಮೀತ್ ಶೆಟ್ಟಿ (೨೫) ನಡುವೆ ಜಗಳ ನಡೆದಿದೆ. ಬಳಿಕ ಅವಾಚ್ಯ ಶಬ್ದಗಳಿಂದ ಬೈದಿರುವ ವಿಶ್ವನಾಥ ಶೆಟ್ಟಿ ಮಗನನ್ನು ಮನೆಯ ಒಳಗೆ ಹಾಕಿ ಪೆಟೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.
ಸ್ವಾಮೀತ್ ಶೆಟ್ಟಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ . ಆರೋಪಿ ವಿಶ್ವನಾಥ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget

Leave a Comment

Your email address will not be published. Required fields are marked *