ಮಂಗಳೂರಿನ ವ್ಯಕ್ತಿಗೆ ಫೇಸ್ಬುಕ್ ಗೆಳೆಯನಿಂದ 1.15 ಲಕ್ಷ ರೂ. ಪಂಗನಾಮ

ಮಂಗಳೂರು: ವಿದ್ಯಾವಂತರೇ ದಿನೇದಿನೇ ಆನ್ಲೈನ್ ವಂಚನೆಗೊಳಗಾಗುತ್ತಿರುವ ಘಟನೆಗಳು ನಮ್ಮೂರಲ್ಲಿ ನಡೆಯುತ್ತಿದ್ದರು ವಂಚನೆಗೊಳಗಾದವರು ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ.

Ad Widget ... ..

ಇದೀಗ ಮಂಗಳೂರಿನ ವ್ಯಕ್ತಿಯೊಬ್ಬರಿಗೆ ಅವರ ಫೇಸ್ಬುಕ್ ಗೆಳೆಯನೊಬ್ಬ 1.5 ಲಕ್ಷ ರೂ ಪಂಗನಾಮ ಹಾಕಿದ ಘಟನೆ ನಡೆದಿದೆ.

Ad Widget

ಮಂಗಳೂರಿನ ವ್ಯಕ್ತಿಯೊಬ್ಬರಿಗೆ ನೆಲ್ಸನ್ ಮಾರ್ಕ್ ಎಂಬಾತ ಫೇಸ್ಬುಕ್ನಲ್ಲಿ ಪರಿಚಿತನಾಗಿದ್ದಾನೆ. ಕೆಲವೇ ದಿನಗಳಲ್ಲಿ ಇವರಿಬ್ಬರು ಸ್ನೇಹಿತರಾಗಿದ್ದು ವಾಟ್ಸಪ್ ನಂಬರ್ ವಿನಿಮಯ ಮಾಡಿಕೊಂಡಿದ್ದಾರೆ. ದಿನದಿಂದ ದಿನಕ್ಕೆ ಸ್ನೇಹ ಬೆಳೆಸಿದ್ದ ವ್ಯಕ್ತಿ ಮಂಗಳೂರಿನ ವ್ಯಕ್ತಿಯನ್ನು ಯಾಮಾರಿಸಿ ಬ್ಯಾಂಕ್ ಖಾತೆಯ ಮಾಹಿತಿ ಪಡೆದುಕೊಂಡಿದ್ದಾನೆ. ಆ ಖಾತೆಗೆ ಹಣ ಜಮಾ ಮಾಡಿರುವುದಾಗಿ ತಿಳಿಸಿ ಬ್ಯಾಂಕ್​ಗೆ ಡೆಪಾಸಿಟ್ ಮಾಡಿದ ಸ್ಲಿಪ್​​​​​​​​ ಕಳುಹಿಸಿದ್ದಾನೆ.

ಆನಂತರ ಜಮಾ ಆಗಿರುವ ಹಣ ಪಡೆಯಲು ಆದಾಯ ತೆರಿಗೆ ಪಾವತಿಸಬೇಕೆಂದು ತಿಳಿಸಿ, ಇಂಡಿಯನ್ ಬ್ಯಾಂಕ್​ನ ದೆಹಲಿ‌ ಶಾಖೆ ಖಾತೆಯ ನಂಬರ್​ ನೀಡಿದ್ದಾನೆ. ಇದನ್ನು ನಂಬಿದ ಮಂಗಳೂರಿನ ವ್ಯಕ್ತಿ, 1.15 ಲಕ್ಷ ರೂಪಾಯಿಯನ್ನು ಹಂತ ಹಂತವಾಗಿ ಬ್ಯಾಂಕ್​ಗೆ ಜಮಾ ಮಾಡಿದ್ದರು. ಆದರೆ ಕೊನೆಗೆ ಮಂಗಳೂರಿನ ವ್ಯಕ್ತಿಗೆ ತಾನು ವಂಚನೆಗೆ ಒಳಗಾಗಿರುವ ವಿಷಯ ತಿಳಿದಿದೆ.

ಮಂಗಳೂರಿನ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Comment

Your email address will not be published. Required fields are marked *