ಬೆಂಗಳೂರು: ಖಾಸಗಿ ಕಂಪನಿಯೊಂದಕ್ಕೆ 2 ಕೋಟಿ ರೂ. ಮನನಷ್ಟ ಪರಿಹಾರ ನೀಡಲು ಮಾಜಿ ಪ್ರಧಾನ ಮಂತ್ರಿ ದೇವೇಗೌಡರಿಗೆ ನ್ಯಾಯಾಲಯ ಆದೇಶ ನೀಡಿದೆ.
ನಂದಿ ಇನ್ಫ್ರಾ ಸ್ಟ್ರಕ್ಚರ್ ಕಾರಿಡಾರ್ (NICE) ಕಂಪನಿಯ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಆರೋಪವೊಂದನ್ನು ಮಾಡಿದ್ದರು. ಇದೀಗ ಅದನ್ನು ಸಾಬೀತುಪಡಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಹೀಗಾಗಿ ನೈಸ್ ಕಂಪನಿಗೆ ₹ 2 ಕೋಟಿ ಪರಿಹಾರ ಕೊಡಬೇಕು ಎಂದು ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಆದೇಶ ಮಾಡಿದೆ.
ದೇವೇಗೌಡರು ಕಂಪನಿಯ ವಿರುದ್ಧ ಮಾಡಿದ್ದ ಆರೋಪ ಸಾಬೀತುಪಡಿಸುವಲ್ಲಿ ವಿಫಲರಾದಾಗ ದೇವೇಗೌಡರ ವಿರುದ್ಧ ನೈಸ್ ಕಂಪನಿಯು ಮಾನನಷ್ಟ ದಾವೆ ಹೂಡಿತ್ತು. ಖಾಸಗಿ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ದೇವೇಗೌಡರು ನೈಸ್ ಸಂಸ್ಥೆಯ ಗೌರವಕ್ಕೆ ಧಕ್ಕೆ ಬರುವಂತೆ ಹೇಳಿಕೆ ನೀಡಿದ್ದರು ಎಂದು ಕಂಪನಿಯು ಆರೋಪಿಸಿ, ₹ 10 ಕೋಟಿ ಮಾನನಷ್ಟ ಪರಿಹಾರ ಕೋರಿ ಅರ್ಜಿ ಸಲ್ಲಿಸಿತ್ತು.