Ad Widget .

ಮಗುವಿಗೆ ಜ್ಚರವೆಂದು ಆಸ್ಪತ್ರೆ ಹೋಗುವ ಬದಲು ಸ್ವಾಮಿಜೀ ಬೇಟಿಯಾದ ತಾಯಿ | ಮುಂದೆ ನಡೆಯಿತು ಭಯಾನಕ ಘಟನೆ

ಚೆನ್ನೈ: ಮಗುವಿಗೆ ದೆವ್ವ ಹಿಡಿದಿರುವುದಾಗಿ ಸ್ವಾಮೀಜಿಯೊಬ್ಬ ಹೇಳಿದ ಕಾರಣಕ್ಕೆ ಜ್ವರದಿಂದ ಬಳಲುತ್ತಿರುವ ಏಳು ವರ್ಷದ ಮಗುವನ್ನು ತಾಯಿಯೇ ಹಿಗ್ಗಾಮುಗ್ಗ ಥಳಿಸಿ, ಅದಲ್ಲದೆ ಆತನಿಗೆ ನೀರು ಆಹಾರ ನೀಟದೆ ಕೊಲೆ ಮಾಡಿರುವ ಭಯಾನಕ ಘಟನೆ ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಅರಾನಿಯಲ್ಲಿ ನಡೆದಿದೆ.

Ad Widget . Ad Widget .

ಬಾಲಕನಿಗೆ ಕೆಲವು ದಿನಗಳಿಂದ ಆರೋಗ್ಯ ಕೆಟ್ಟಿತ್ತು. ಮಾನಸಿಕವಾಗಿಯೂ ಆತನಿಗೆ ಏನೋ ಸಮಸ್ಯೆಯಾಗಿತ್ತು. ಆಸ್ಪತ್ರೆಗೆ ಹೋಗುವ ಬದಲು ಈ ತಾಯಿ ಸ್ವಾಮೀಜಿಯನ್ನು ಭೇಟಿಯಾಗಿದ್ದಾಳೆ. ಆತನಿಗೆ ದೆವ್ವ ಹಿಡಿದಿದೆ ಎಂದು ಆತ ಹೇಳಿದ್ದಾನೆ. ಮನೆಗೆ ಬಂದವಳೇ ಮಗನನ್ನು ಹಿಗ್ಗಾಮುಗ್ಗ ಥಳಿಸಿದ ತಾಯಿ, ಮೂರು ದಿನಗಳಿಂದ ಆತನಿಗೆ ಆಹಾರ ನೀಡದೇ ಪೀಡಿಸಿದ್ದಾಳೆ. ಸಾಲದು ಎಂಬುದಕ್ಕೆ ಇದಕ್ಕೆ ನೆರೆಹೊರೆಯ ಇನ್ನಿಬ್ಬರು ಮಹಿಳೆಯರು ಸಹಕರಿಸಿದ್ದಾರೆ.

Ad Widget . Ad Widget .

ಹೀಗೆ ಮಾಡಿದರೆ ಮಗನ ಮೈಮೇಲೆ ಇರುವ ಭೂತ ಹೊರಟುಹೋಗುತ್ತದೆ ಎಂದು ನಂಬಿದ್ದಾಳೆ. ಇದರಿಂದ ಮಗು ನರಳಿ ನರಳಿ ಸತ್ತು ಹೋಗಿದೆ. ಘಟನೆಯ ಬಗ್ಗೆ ತಿಳಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ತಲುಪುವ ಮೊದಲೇ ಬಾಲಕ ಮೃತಪಟ್ಟಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ತಾಯಿ ಹಾಗೂ ಇಬ್ಬರು ಮಹಿಳೆಯರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *