Ad Widget .

ಪಾಕಿಸ್ತಾನದ ಮಾರ್ಗದರ್ಶನದಲ್ಲಿ ಭಾರತೀಯರ ಮತಾಂತರ | ಸಾವಿರ ಸಾವಿರ ಸಂಖ್ಯೆಯಲ್ಲಿ ಅನ್ಯಧರ್ಮೀಯರು ಇಸ್ಲಾಂಗೆ….!?

Ad Widget . Ad Widget .

ಉತ್ತರ ಪ್ರದೇಶ: ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಮಕ್ಕಳು ಮತ್ತು ಅಸಹಾಯಕರನ್ನು ಆಮಿಷ ಒಡ್ಡಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುತ್ತಿದ್ದ ಜಾಲವೊಂದು ಪತ್ತೆಯಾಗಿದೆ. ಈ ಸಂಬಂಧ ಇಬ್ಬರನ್ನು ಉತ್ತರ ಪ್ರದೇಶದ ಎಟಿಎಸ್ ಅಧಿಕಾರಿಗಳು ಬಂಧಿಸಿದ್ದಾರೆ.

Ad Widget . Ad Widget .

ಕಳೆದ ಜೂನ್ 2ರಂದು ದೆಹಲಿಯ ದಾಸನ ದ ದೇವಾಲಯಕ್ಕೆ ಇಬ್ಬರು ಅಕ್ರಮವಾಗಿ ನುಸುಳಿದ್ದರು. ಆ ಸಂಬಂಧ ಅವರಿಬ್ಬರನ್ನು ಬಂದಿಸಿ ತೀವ್ರ ವಿಚಾರಣೆಗೊಳಪಡಿಸಿದಾಗ ಹಲವಾರು ಆಘಾತಕಾರಿ ಅಂಶಗಳು ಹೊರಬಂದಿವೆ. ಬಂಧಿತರನ್ನು ಜಂಹಗೀರ್ ಹಾಗೂ ಉಮರ್ ಗೌತಮ್ ಎಂದು ಗುರುತಿಸಲಾಗಿದೆ. ಇದರಲ್ಲಿ ಉಮರ್ ಗೌತಮ್ ಇದುವರೆಗೆ ಬರೋಬ್ಬರಿ 1000ಕ್ಕೂ ಹೆಚ್ಚು ಜನರನ್ನು ಇಸ್ಲಾಂಗೆ ಮತಾಂತರಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಇವರಿಬ್ಬರು ಸಾವಿರ ಸಾವಿರ ಜನರನ್ನು ಇಸ್ಲಾಮಿಗೆ ಮತಾಂತರಿಸಿರುವ ಸಂದರ್ಭ ಇವರ ಹಿಂದಿರುವ ಜಾಲ ಬಹು ದೊಡ್ಡಸಖ್ಯೆಯಲ್ಲಿ ಮತಾಂತರ ನಡೆಸಿರಬಹುದು ಎನ್ನಲಾಗಿದೆ. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಅಸಹಾಯಕರು ಮತ್ತು ಮಕ್ಕಳನ್ನು ಆಮಿಷವೊಡ್ಡಿ ಬಲಾತ್ಕಾರವಾಗಿ ಇಸ್ಲಾಮಿಗೆ ಮತಾಂತರಿಸುತ್ತಿರುವುದು ಬೆಳಕಿಗೆ ಬಂದಿದೆ. ಬಂದಿತರು ತಾವು ಪಾಕಿಸ್ತಾನದ ಗುಪ್ತಚರ ಇಲಾಖೆ(ISI) ಗೆ ಏಜೆಂಟರುಗಳಾಗಿರುವ ಆಘಾತಕಾರಿ ಅಂಶವನ್ನು ಹೊರಹಾಕಿದ್ದಾರೆ. ಇನ್ನು ಇವರ ಜೊತೆ ಬಹುದೊಡ್ಡ ಮತಾಂತರ ಜಾಲ ದೇಶವ್ಯಾಪಿ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ. ಇದರ ಮೂಲಕ ಭಾರತದಲ್ಲಿ ಧರ್ಮ ಪರಿವರ್ತನೆ ಬಹುದೊಡ್ಡ ಪಿತೂರಿ ನಡೆಸಲಾಗಿರುವುದು ಬಹಿರಂಗಗೊಂಡಿದೆ.

ಆರೋಪಿಗಳ ವಿಚಾರಣೆ ವೇಳೆ ಪಾಕಿಸ್ತಾನದ ಐಎಸ್ಐ ನಿರ್ದೇಶನದಲ್ಲಿ ಕೆಲಸ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಸಾಕಷ್ಟು ಪುರಾವೆಗಳು ಲಭ್ಯವಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ ಎಂದು ATS ADG ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.

Leave a Comment

Your email address will not be published. Required fields are marked *