Ad Widget .

ಗೋ ಸಾಗಾಟದ ಟೆಂಪೋ ಹರಿಸಿ ಗೋ ರಕ್ಷಕನ ಹತ್ಯೆ

ಗುಜರಾತ್: ಗೋ ರಕ್ಷಕನ ಮೇಲೆ ಗೋಸಾಗಾಟದ ಟೆಂಪೋ ಹರಿಸಿ ಹತ್ಯೆ ಮಾಡಿದ ಘಟನೆ ರಾಜ್ಯದ ಅಹಮದಬಾದ್ ನಲ್ಲಿ ನಡೆದಿದೆ. ಮೃತಪಟ್ಟವರನ್ನು ಹಾರ್ದಿಕ್ ಕನ್ಸರ್ (29) ಎಂದು ಗುರುತಿಸಲಾಗಿದೆ.

Ad Widget . Ad Widget .

ಕಳೆದ ಶುಕ್ರವಾರ ಧರಾಂಪುರ- ವಲ್ಸಾದ್ ಹೆದ್ದಾರಿಯಲ್ಲಿ ಟೆಂಪೋ ಒಂದರಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಹಾರ್ದಿಕ್ ಗೆ ಸಿಕ್ಕಿದೆ. ತಕ್ಷಣ ಕಾರ್ಯಪ್ರವ್ರತರದ ಹಾರ್ದಿಕ್ ಮತ್ತು ಆತನ ಇಬ್ಬರು ಸ್ನೇಹಿತರು ಬಾಮ್’ಕ್ರೀಕ್ ಸೇತುವೆವ ಮೇಲೆ ತಮ್ಮ ಲಾರಿಯೊಂದನ್ನು ಅಡ್ಡ ನಿಲ್ಲಿಸಿದ್ದರು. ಗೋಸಾಗಾಟದ ಲಾರಿ ಬರುತ್ತಿದ್ದಂತೆ ಹಾರ್ದಿಕ್ ಅದರ ಬಳಿ ತೆರಳಿದ್ದಾನೆ. ಟೆಂಪೋ ಚಾಲಕ ತಕ್ಷಣ ಹಾರ್ದಿಕ್ ಗೆ ಡಿಕ್ಕಿ ಹೊಡೆಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಪರಿಣಾಮ ಹಾರ್ದಿಕ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

Ad Widget . Ad Widget .

ಈ ಘಟನೆ ನಡೆಯುವ ಮೊದಲು ಪೊಲೀಸರು ಗೋ ಸಾಗಾಟದ ವಾಹನವನ್ನು ಬೆನ್ನತ್ತಿದ್ದರು ಮತ್ತು ವಾಹನ ಚಾಲಕ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಎನ್ನಲಾಗಿದೆ. ಈ ಪ್ರಕರಣದ ಸಂಭಂದ ಐವರನ್ನು ಬಂದಿಸಲಾಗಿದ್ದು ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *