Ad Widget .

ದೀಪಾವಳಿ ವೇಳೆಗೆ ಕೊರೊನ ಮೂರನೇ ಆಟಂ ಬಾಂಬ್….! ಆತಂಕ ಎಬ್ಬಿಸಿದ ತಜ್ಞರ ಹೇಳಿಕೆ

Ad Widget . Ad Widget .

ನವದೆಹಲಿ: ಭಾರತದಲ್ಲಿ ಇನ್ನು ಎರಡರಿಂದ ನಾಲ್ಕು ತಿಂಗಳ ಅವಧಿಯೊಳಗೆ ಕೊರೋನಾ 3ನೇ ಅಲೆ ಕಾಣಿಸಿಕೊಳ್ಳಬಹುದು ಆರೋಗ್ಯ ಕ್ಷೇತ್ರದ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Ad Widget . Ad Widget .

ಆದರೆ ಮೊದಲ 2 ಅಲೆಗೆ ಹೋಲಿಸಿದರೆ ಭಾರತವು 3ನೇ ಅಲೆಯನ್ನು ಹೆಚ್ಚು ಉತ್ತಮ ರೀತಿಯಲ್ಲಿ ನಿರ್ವಹಿಸಲಿದೆ ಎಂದು ಹೇಳಿದ್ದಾರೆ.

ರಾಯಿಟರ್ಸ್‌ ಸುದ್ದಿ ಸಂಸ್ಥೆ ಆನ್‌ಲೈನ್‌ ಮೂಲಕ 40 ಜನ ಆರೋಗ್ಯ ಕ್ಷೇತ್ರದ ತಜ್ಞರು, ವೈದ್ಯರು, ವಿಜ್ಞಾನಿಗಳು, ಸೂಕ್ಷ್ಮಾಣುಜೀವಿ ಮತ್ತು ಸಾಂಕ್ರಾಮಿಕ ರೋಗ ತಜ್ಞರನ್ನು ಸಮೀಕ್ಷೆಗೆ ಒಳಪಡಿಸಿತ್ತು. ಈ ವೇಳೆ 3 ತಜ್ಞರು ಆಗಸ್ಟ್‌ ವೇಳೆಗೆ ಎಂದು ಹೇಳಿದರೆ, 21 ತಜ್ಞರು ಅಕ್ಟೋಬರ್‌ ವೇಳೆಗೆ ಎಂದಿದ್ದಾರೆ. 12 ಜನರು ಸೆಪ್ಟೆಂಬರ್‌ ವೇಳೆಗೆ ಎಂದು ಹಾಗೂ 4 ಜನರು 2020ರ ನವೆಂಬರ್‌ನಿಂದ 2021ರ ಫೆಬ್ರುವರಿ ವೇಳೆಗೆ 3ನೇ ಅಲೆ ಕಾಣಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.

ಕೊರೋನಾ ಎರಡನೇ ಅಲೆ ಈಗಾಗಲೇ ಭಾರತದಲ್ಲಿ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿದೆ. ಅಲ್ಲದೆ, ಸಾವಿರಾರು ಜನರ ಸಾವಿಗೆ ಕಾರಣವಾಗಿದೆ. ಭಾರತದ ಆರ್ಥಿಕತೆ ಮತ್ತು ಜನರ ಹಣಕಾಸು ಸ್ಥಿತಿ ತೀರಾ ಪಾತಾಳಕ್ಕೆ ತಲುಪಿದೆ.

ಇದರ ಬೆನ್ನಿಗೆ ಇಂದು ಸರ್ಕಾರ ಮತ್ತೊಂದು ಎಚ್ಚರಿಕೆ ನೀಡಿರುವ ಏಮ್ಸ್​ (Aiims) ಮುಖ್ಯಸ್ಥ ಡಾ. ರಣದೀಪ್ ಗುಲೇರಿಯಾ “ಇನ್ನೂ 6 ರಿಂದ 8 ವಾರಗಳಲ್ಲಿ ಕೊರೋನಾ ಮೂರನೇ ಅಲೆ ಭಾರತಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ. ಅಲ್ಲದೆ, ವೈರಸ್ ರೂಪಾಂತರವನ್ನು ಇನ್ನಷ್ಟು ಅಧ್ಯಯನ ಮಾಡಲು ಕೋವಿಡ್ ವಿರುದ್ಧದ ಭಾರತದ ಹೋರಾಟದಲ್ಲಿ ಹೊಸ ಗಡಿಯನ್ನು ಅಭಿವೃದ್ಧಿಪಡಿಸ ಬೇಕಾಗಿದೆ. COVID-19 ರ ಡೆಲ್ಟಾ ರೂಪಾಂತರದಿಂದ ವಿಕಸನಗೊಳ್ಳಲಿದೆ. ಹೀಗಾಗಿ ಮೊನೊಕ್ಲೋನಲ್ ಆಂಟಿಬಾಡಿ ಚಿಕಿತ್ಸೆಯ ಬಗ್ಗೆ ಹೊಸ ಕಾಳಜಿ ವಹಿಸಬೇಕಿದೆ” ಎಂದು ತಿಳಿಸಿದ್ದಾರೆ.

Leave a Comment

Your email address will not be published. Required fields are marked *